ನವದೆಹಲಿ: ಹಬ್ಬ ಹಾಗೂ ರಜೆಗಳ ಸೀಸನ್ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆ ಎರಡು ವಾರ ಮುಂಚಿತವಾಗಿ ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿರುವ ಐಸಿಎಮ್‌ಆರ್ ಪ್ರಯಾಣ ಸಲಹೆಯನ್ನು ಸೂಚಿಸಿದೆ.
"ಭಾರತವು ಈಗಾಗಲೇ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಎಚ್ಚರಿಕೆಯ ನಡುವೆ ಇದೆ. ಮೂರನೇ ಅಲೆಯ ಸಂದರ್ಭದಲ್ಲಿನ ಉಂಟಾಗುವ ಅಪಾಯಗಳನ್ನು ಗುರುತಿಸಲು, ಅದಕ್ಕೆ ತಕ್ಕುದಾದ ಪರಿಹಾರ ಕಾರ್ಯವನ್ನು ನಡೆಸಲು ಈ ಸಲಹೆ ಸಹಕಾರಿ ಆಗಲಿದೆ. ಸಂದರ್ಶಕರು, ನಿವಾಸಿಗಳು ಮತ್ತು ಸ್ಥಳೀಯ ಅಧಿಕಾರಿಗಳಿಗಾಗು ನಾವು ಹಂಚಿಕೊಂಡ ಈ ಸಲಹೆಯು ದೇಶದ ಕಲ್ಯಾಣವನ್ನು ರಕ್ಷಿಸಲು ಸಹಕಾರಿ ಆಗಲಿದೆ," ಎಂದು ಐಸಿಎಮ್‌ಆರ್ ತಿಳಿಸಿದೆ.
ಐಸಿಎಮ್‌ಆರ್‌ನ ಹಿರಿಯ ವಿಜ್ಞಾನಿಗಳಾದ ಬಾಲ್‌ರಾಮ್ ಭಾರ್ಗವ್ ಹಾಗೂ ಡಾ. ಸಮೀರ್ ಪಾಂಡಾ ಗಣಿತದ ಮಾದರಿಯ ಆಧಾರದಲ್ಲಿ ಒಂದು ಅಧ್ಯಯನವನ್ನು ಮಾಡಿದ್ದಾರೆ. ಈ ಅಧ್ಯಯನದಲ್ಲಿ "ಮೂರನೇ ಕೋವಿಡ್ ಅಲೆಯು ಈ ರಜೆಯ ಸೀಸನ್‌ನಲ್ಲಿ ಶೇಕಡ 47 ರಷ್ಟು ಅಧಿಕವಾಗಲಿದೆ. ಹಾಗೆಯೇ ಎರಡು ವಾರಗಳು ಮುಂಚಿತವಾಗಿಯೇ ಕೋವಿಡ್ ಅಲೆಯು ಕಾಣಿಸಿಕೊಳ್ಳಲಿದೆ," ಎಂದು ಕಂಡು ಬಂದಿದೆ.
"ಯುಎಸ್‌ಎಗಿಂತ ಅಧಿಕವಾಗಿ ಭಾರತದಲ್ಲಿ ಜನಸಾಂದ್ರತೆಯ ಪರಿಣಾಮ ಹೊಂದಿರುವ ಭಾರತದಲ್ಲಿ ಈ ಅಧ್ಯಯನವನ್ನು ಮಾಡಲಾಗಿದೆ. ಈ ಅಧ್ಯಯನದಲ್ಲಿ ರಜಾ ಸಂದರ್ಭದಲ್ಲಿ ಕೋವಿಡ್ ಮೂರನೇ ಅಲೆಯು ಶೇಕಡ 103 ಕ್ಕೆ ಏರಿಕೆ ಆಗುವ ಸಾಧ್ಯತೆಯು ಕಂಡು ಬಂದಿದೆ. ಇನ್ನು ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯು ಶೇಕಡ 43 ರಷ್ಟು ಅಧಿಕವಾಗಬಹುದು. ಇನ್ನು ರಜೆಯ ಸಂದರ್ಭದಲ್ಲಿ ಕೋವಿಡ್ ಪ್ರಯಾಣದ ಮಾರ್ಗಸೂಚಿ ಸಡಿಲಿಕೆಯನ್ನು ನೋಡಿದಾಗ ಈ ವಿದ್ಯಮಾನವು ನಾಲ್ಕು ವಾರಗಳ ಕಾಲ ನಡೆಯಬಹುದು," ಎಂದು ತಿಳಿಸಿದೆ.
"ಕೋವಿಡ್‌ನ ರೋಗ ಲಕ್ಷಣಗಳು ಇದ್ದರೆ ಯಾರಿಗೂ ಪ್ರಯಾಣ ಮಾಡುವ ಅವಕಾಶವನ್ನು ನೀಡಬಾರದು. ಕೆಮ್ಮು, ರುಚಿ ಹಾಗೂ ವಾಸನೆಯ ಗ್ರಹಿಕೆ ಇಲ್ಲದಿದ್ದರೆ, ಪ್ರಯಾಣಕ್ಕೆ ಅವಕಾಶ ನೀಡಬಾರದುಪ್ರಯಾಣದ ವೇಳೆ ಸಂಪೂರ್ಣ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ ಇತ್ತೀಚಿನ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ತೋರಿಸಿದರೆ ಮಾತ್ರ ಪ್ರಯಾಣ ಮಾಡುವ ಅವಕಾಶ ನೀಡಬೇಕು," ಎಂದು ಐಸಿಎಮ್‌ಆರ್ ತಿಳಿಸಿದೆ.
"ಇನ್ನು ಎಲ್ಲಾ ಪ್ರಯಾಣಿಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿರಬೇಕು. ಈ ಮೂಲಕ ಒಂದು ವೇಳೆ ಕೋವಿಡ್ ದೃಢಪಟ್ಟರೆ ನೀವು ಇರುವ ಪ್ರದೇಶವನ್ನು ಪತ್ತೆ ಹಚ್ಚಲು ಸಹಕರಿಸಬೇಕು. ಕೋವಿಡ್‌ನ ಎಲ್ಲಾ ಮಾರ್ಗಸೂಚಿಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿ," ಎಂದು ಕೂಡಾ ಹೇಳಿದೆ.
"ದೇಶದಲ್ಲಿ ಕೋವಿಡ್ ಎರಡನೇ ಅಲೆಯು ಕಾಣಿಸಿಕೊಂಡ ಬಳಿಕ ಹಲವಾರು ಮಾಧ್ಯಮಗಳು ಇದು ಪ್ರಯಾಣಕ್ಕೆ ಸಡಿಲಿಕೆ ಮಾಡಿದ ಪರಿಣಾಮ ಎಂದು ಹೇಳಿದ್ದವು. ಹಲವಾರು ಮಂದಿ ಪ್ರಯಾಣ ಮಾಡಿದ್ದಾರೆ. ಹಿಮಾಲಯದ ಪರ್ವತದಾಚೆಯ ಪಟ್ಟಣಗಳಂತಹ ಸ್ಥಳಗಳಲ್ಲಿ ಇಂತಹ ಪ್ರಯಾಣವು ವಿಶೇಷವಾಗಿ ಚಿಂತಾಜನಕ ಸ್ಥಿತಿಯನ್ನು ಉಂಟು ಮಾಡಿತು. ಪ್ರಯಾಣಿಕರು ಅಧಿಕವಾದ ಹಿನ್ನೆಲೆ ಈ ಪ್ರದೇಶದಲ್ಲಿ ಜನಸಾಂದ್ರತೆಯು ಅಧಿಕವಾಯಿತು. ಕೋವಿಡ್ ಹರಡುವಿಕೆಗೆ ಕಾರಣವಾಯಿತು," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.
"ಈ ಹಿಂದಿನ ಪ್ರಯಾಣ ನಿರ್ಬಂಧಕ್ಕೆ ಬದಲಾಗಿ ಜವಾಬ್ದಾರಿಯುತವಾದ ಪ್ರಯಾಣ ನಿರ್ಬಂಧಕ್ಕೆ ಅಧಿಕ ಆಧ್ಯತೆ ನೀಡಬೇಕು," ಎಂದು ಐಸಿಎಮ್‌ಆರ್ ಅಭಿಪ್ರಾಯಿಸಿದೆ. "ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಇದರಿಂದಾಗಿ ಕೋವಿಡ್ ಹರಡುವುದನ್ನು ನಾವು ಸ್ವಲ್ಪ ಮಟ್ಟಿಗಾದರೂ ತಡೆಯಬಹುದು. ಪ್ರಯಾಣದ ಮೇಲೆ ನಿರ್ಬಂಧವೂ ಕೂಡಾ ಕೋವಿಡ್ ತಡೆಗೆ ಮಹತ್ವದ ಪಾತ್ರವನ್ನು ವಹಿಸಲಿದೆ. ಇನ್ನು ಕೋವಿಡ್ ನೆಗೆಟಿವ್ ವರದಿಯನ್ನು ತೋರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡುವುದು ಸೂಕ್ತ," ಎಂದು ಐಸಿಎಮ್‌ಆರ್ ಅಭಿಪ್ರಾಯಿಸಿದೆ.