HEALTH TIPS

ಕೆ-ಪೋನ್ ಯೋಜನೆ ಈ ವರ್ಷಾಂತ್ಯ ಪೂರ್ಣ: 30,000 ಕಚೇರಿಗಳ ಸಮೀಕ್ಷೆ, 35,000 ಕಿಮೀ ಆಪ್ಟಿಕಲ್ ಫೈಬರ್ ಕೇಬಲ್, 8 ಲಕ್ಷ ಕೆಎಸ್‍ಇಬಿ ಲೈನ್ ಮೊದಲಾದವುಗಳು ಪೂರ್ಣ: ಮುಖ್ಯಮಂತ್ರಿ

                       ತಿರುವನಂತಪುರಂ: ಹೈ-ಸ್ಪೀಡ್ ಇಂಟರ್ನೆಟ್ ನ್ನು ಉಚಿತವಾಗಿ ನೀಡಲು ಆರಂಭಿಸಲಾದ ಕೆ-ಫೆÇೀನ್ ಯೋಜನೆಯು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವತ್ತ ಸಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಯೋಜನೆಯ ಮೊದಲ ಹಂತವು ಫೆಬ್ರವರಿ 2021 ರಲ್ಲಿ ಪೂರ್ಣಗೊಂಡಿತು.

                30,000 ಕಚೇರಿಗಳು, 35,000 ಕಿಮೀ ಆಪ್ಟಿಕಲ್ ಫೈಬರ್ ಕೇಬಲ್, 8 ಲಕ್ಷ ಕೆ.ಎಸ್.ಇ.ಬಿ. ಲೈನ್ ಗಳು  ಮತ್ತು 375 ಪಿಒಪಿಗಳ ಪ್ರಿಫ್ಯಾಬ್ ಸ್ಥಳಗಳ ಸಮೀಕ್ಷೆ ಪೂರ್ಣಗೊಂಡಿದೆ. ನೆಟ್‍ವರ್ಕ್ ಕಾರ್ಯಾಚರಣಾ ಕೇಂದ್ರ ಮತ್ತು ಕೆಎಸ್‍ಇಬಿ ಕಂಬಗಳ ಮೂಲಕ ಕೇಬಲ್ ಹಾಕುವ ಕೆಲಸ ಪ್ರಗತಿಯಲ್ಲಿದೆ.

                 ಕೆ-ಪೋನ್ ಯೋಜನೆಯ ಭಾಗವಾಗಿ ಈಗಾಗಲೇ 7389 ಸರ್ಕಾರಿ ಸಂಸ್ಥೆಗಳನ್ನು ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಸಂಪರ್ಕಿಸಲಾಗಿದೆ. ಕೆ-ಪೋನ್ 20 ಲಕ್ಷಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮತ್ತು ಇತರರಿಗೆ ಉಚಿತವಾಗಿ ಇಂಟರ್ನೆಟ್ ಸೌಕರ್ಯ ಒದಗಿಸಲಿದೆ.  ಈ ಯೋಜನೆಯು ಸುಮಾರು 30,000 ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries