ಕಾಸರಗೋಡು: ಮುಂದುವರಿದ ಜನಾಂಗಗಳಲ್ಲಿ ಆರ್ಥಿವಾಗಿ ಹಿಂದುಳಿದವರ ಕುರಿತಾದ ಅಮೀಕ್ಷೆ ಡಿ.31ರ ಮುಂಚಿತವಾಗಿ ಪೂರ್ತಿಗೊಳಿಸಲಾಗುವುದು ಎಂದು ಮುಂದುವರಿದ ಜನಾಂಗಗಳಲ್ಲಿ ಆರ್ಥಿಕವಾಗಿ ಹಿಂದುಳಿದವರ ರಾಜ್ಯ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಎಂ.ಆರ್.ಹರಿಹರನ್ ನಾಯರ್ ತಿಳಿಸಿದರು.
ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ಜರುಗಿದ ಆಯೋಗದ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಮೀಕ್ಷೆಯಲ್ಲಿ ಲಭಿಸುವ ವಿಚಾರಗಳನ್ನು ಜನವರಿ ತಿಂಗಳಲ್ಲಿ ಸಂಗ್ರಹಿಸಿ, ಪೆಬ್ರವರಿ ತಿಂಗಳಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದವರು ನುಡಿದರು.
ರಾಜ್ಯದ ಸುಮಾರು 20 ಸಾವಿರ ವಾರ್ಡ್ ಗಳಲ್ಲಿ ಜಾತಿಗಣನೆ ನಡೆಸಲಾಗುವುದು. ಆಯ್ದ ಪದವೀಧರರನ್ನು, ಕುಟುಂಬಶ್ರೀ ಕಾರ್ಯಕರ್ತರನ್ನು, ಸ್ವಯಂ ಸೇವಾ ಮನೋಭಾವ ವಿರುವ ಮಮದಿಯನ್ನು ಮೀಕ್ಷೆಗಾಗಿ ಬಳಸಲಾಗುವುದು. ಈ ನಿಟ್ಟಿನಲ್ಲಿ ಪ್ರತ್ಯೇಕ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಪ್ರತಿ ಸ್ಥಳೀಯಾಡಳಿತ ಸಂಸ್ಥೇಗಳ ವಾರ್ಡ್ ನಲ್ಲಿ ಅತ್ಯಧಿಕ ಮುಗ್ಗಟ್ಟು ಅನುಭವಿಸುತ್ತಿರುವ 5 ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಲಾಗುವುದು. ಆರ್ಥಿಕವಾಗಿ ಹಿಂದುಳಿದವರಿಗೆ ಈಗ ಲಭಿಸುತ್ತಿರುವ ಸೌಲಭ್ಯಗಳಿಗೆ ಈ ಕ್ರಮ ಯಾವ ರೀತಿಯಲ್ಲೂ ತೊಡಕಾಗದು ಎಂದವರು ನುಡಿದರು.
ಈ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಕಾರ್ಯಕರ್ತರಿಗೆ ಈಗಾಗಲೇ ಪ್ರಶ್ನಾವಳಿಗಳನ್ನು ನೀಡಲಾಗಿದೆ. ಸುಮಾರು ಒಂದು ಲಕ್ಷ ಮನೆಗಳಲ್ಲಿ ಅನುಭವಿಸಲಾಗುವ ಆರ್ಥಿಕ ಸಂಕಷ್ಟ ಯಾವ ರೂಪದ್ದು ಎಂಬುದನ್ನು ಆಳವಾಗಿ ಅಭ್ಯಸಿಸಲಾಗುವುದು. ಈ ಸಮೀಕ್ಷೆಯ ಅಂಗವಾಗಿ ಜಾತಿ ಸಂಘಟನೆಗಳ ಪ್ರತಿನಿಧಿಗಳ ಸಭೆ ಸರಕಾರಿ ಅತಿಥಿಮಂದಿರದಲ್ಲಿ ಜರುಗಿತು.
ಅಹವಾಲು ಸ್ವೀಕಾರ ಸಭೆಯಲ್ಲಿ ವಿವಿಧ ಸಂಘಟನೆಗಳ ಸುಮಾರು 20 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಮೆಂಬರ್ ಸೆಕ್ರೆಟರಿ ಜ್ಯೋತಿ ಕೆ, ರೆಜಿಸ್ತ್ರಾರ್ ಕೆ.ಪಿ.ಪುರುಷೋತ್ತಮನ್, ಸದಸ್ಯ ಎ.ಜಿ.ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು.