ಕಾಸರಗೋಡು: ಕಳಿಯಾಟ ಸಹಿತ ಉತ್ಸವಗಳಿಗೆ, ರಾಲಿ ಇತ್ಯಾದಿಗಳಿಗೆ ಕಟ್ಟುನಿಟ್ಟುಗಳ ಸಹಿತ ಗರಿಷ್ಠ 40 ಮಂದಿ ಭಾಗಿಗಳಾಗಲು ಅನುಮತಿ ನೀಡಲಾಗಿದೆ.
ಆನ್ ಲೈನ್ ರೂಪದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತಿಳಿಸಿರುವ ಕೊರೋನಾ ಪ್ರತಿರೋಧ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸ್ಥಳೀಯ ಪೆÇಲೀಸ್ ಸ್ಟೇಷನ್ ಹೌಸ್ ಆಫೀಸರ್ ಅವರ, ಪಂಚಾಯತ್/ ನಗರಸಭೆ ಕಾರ್ಯದರ್ಶಿಯ ಲಿಖಿತ ಅನುಮತಿ ಕಡ್ಡಾಯವಾಗಿದೆ. ಸಮಿತಿ ಪದಾಧಿಕಾರಿಗಳು ಕಟ್ಟುನಿಟ್ಟು ಪಾಲಿಸುವ ಬಗ್ಗೆ ಲಿಖಿತ ರೂಪದ ಪತ್ರ ನೀಡಬೇಕಿದೆ ಎಂದು ಸಭೆ ತಿಳಿಸಿದೆ.
ಮಂಗಳವಾರ ನಬಿದಿನಾಚರಣೆ ಅಂಗವಾಗಿ ರಾಲಿ ನಡೆಸುವ ಸಂಬಂಧ ಸ್ಥಳೀಯ ಪೆÇಲೀಸ್ ಸ್ಟೇಷನ್ ನ ಸ್ಟೇಷನ್ ಹೌಸ್ ಆಫೀಸರ್ ಅವರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಜನಸಂದಣಿ ನಿಯಂತ್ರಣ ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಸ್ಪೆಷಲ್ ಬ್ರಾಂಚ್ ಡಿ.ವೈ.ಎಸ್.ಪಿ. ಪಿ.ಕೆ.ಸುಧಾಕರನ್, ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಡಾ.ಇ.ಮೋಹನ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.