ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 4050 ಆದ್ಯತೆ ಪಡಿತರ ಚಿಟಿಗಳ ವಿತರಣೆ ನಡೆಸಲಾಗಿದೆ.
ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆಗಳ ಅಂಗವಾಗಿ ಇದನ್ನು ನಡೆಸಲಾಗಿದೆ. ಮೇ 1ರಿಂದ ಸೆ.30 ವರೆಗಿನ ಗಣನೆ ಇದಾಗಿದೆ. ಹೊಸದುರ್ಗ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆದ್ಯತೆ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ.ಇಲ್ಲಿ 2005 ಪಡಿತರ ಚಿಟಿಗಳ ವಿತರಣೆ ಜರುಗಿದೆ. ಮಂಜೇಶ್ವರ ತಾಲೂಕಿನಲ್ಲಿ 1234, ಕಾಸರಗೊಡು ತಾಲೂಕಿನಲ್ಲಿ 279, ವೆಳ್ಳರಿಕುಂಡ್ ತಾಲೂಕಿನಲ್ಲಿ 532 ಆದ್ಯತೆ ಪಡಿತರ ಚಿಟಿಗಳ ವಿತರಣೆಯಾಗಿದೆ.
ಕಾಸರಗೋಡು ತಾಲೂಕು ಮಟ್ಟದ ಆದ್ಯತೆ ಪಡಿತರ ಚೀಟಿಯ ವಿತರಣೆ ಉದ್ಘಾಟನೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ನೆರವೇರಿಸಿದರು. ಮಂಜೇಶ್ವರದಲ್ಲಿ ಶಾಸಕ ಎ.ಕೆ.ಎಂ.ಅಶ್ರಫ್, ಹೊಸದುರ್ಗದಲ್ಲಿ ಶಾಸಕ ಇ.ಚಂದ್ರಶೇಖರನ್, ವೆಳ್ಳರಿಕುಂಡಿನಲ್ಲಿ ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು.