HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಜಲಸಂಗ್ರಹ ಯೋಜನೆಗಳಿಗೆ 4.28 ಕೋಟಿ ರೂ.ನ ಆಡಳಿತೆ ಮಂಜೂರಾತಿ

                                    

               ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಮಗ್ರ ಜಲಸಂಗ್ರಹ ಉದ್ದೇಶದೊಂದಿಗೆ ವಿವಿಧ ಪ್ರದೇಶಗಳ ಜಲಸಂರಕ್ಷಣೆ ನಿರ್ಮಿತಿಗಳ ನಿರ್ಮಾಣ ಮತ್ತು ನವೀಕರಣಗಳಿಗಾಗಿ 4.28 ಕೋಟಿ ರೂ.ನ ಆಡಳಿತೆ ಮಂಜೂರಾತಿ ಲಭಿಸಿದೆ.

               ಕಾಸರಗೋಡು ಅಭಿವೃದ್ಧಿ ಪ್ಯಾಜೇಜ್ ಜಿಲ್ಲಾ ಮಟ್ಟದ ಸಭೆ ಈ ಮಂಜೂರಾತಿ ನೀಡಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.   

             ದೇಲಂಪಾಡಿ ಗ್ರಾಮ ಪಂಚಾಯತ್ ನ ಬೆಳ್ಳಿಪ್ಪಾಡಿ ಕುಕ್ಕುಗುಡ್ಡೆಯ ವಿ.ಸಿ.ಬಿ.ಕಂ ಟ್ರಾಕ್ ವೇ ನಿರ್ಮಾಣಕ್ಕೆ 43 ಲಕ್ಷ ರೂ., ವರ್ಕಾಡಿ ಗ್ರಾಮ ಪಂಚಾಯತ್ ನ ಬಾಳೆಪುಣಿ-ನಂದಿಮಾರ್ ವಿ.ಸಿ.ಬಿ. ಕಂ ಟ್ರಾಕ್ ವೇ ನಿರ್ಮಾಣಕ್ಕೆ 57.40 ಲಕ್ಷ ರೂ., ವರ್ಕಾಡಿ ಗ್ರಾಮ ಪಂಚಾಯತ್ ನ ಆಲ್ವಾರ್ ನ ದೇಶಮಾರ್ ನದಿ ಬಯ್ಲು ನದಿ ಬಳಿ ವಿ.ಸಿ.ಬಿ. ನಿರ್ಮಾಣಕ್ಕೆ 18.30 ಲಕ್ಷ ರೂ., ಎಣ್ಮಕಜೆ ಗ್ರಾಮ ಪಂಚಾಯತ್ ನ ಪಡ್ರೆ ಗ್ರಾಮದ ಏತಡ್ಕದಲ್ಲಿ ವಿ.ಸಿ.ಬಿ ನಿರ್ಮಾಣಕ್ಕೆ 99.80 ಲಕ್ಷ ರೂ. ಹೀಗೆ ವಿವಿಧ ಯೋಜನೆಗಳಿಗೆ ನಿಧಿ ಮೀಸಲಿರಿಸಲಾಗಿದೆ. ಈ ಯೋಜನೆಗಳ ಜಾರಿಯ ಹೊಣೆ ನಿರಾವರಿ ವಿಭಾಗ ಕಾರ್ಯಕಾರಿ ಇಂಜಿನಿಯರ್ ಗೆ ವಹಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries