ನವದೆಹಲಿ: ಸುಮಾರು 43 ಪ್ರತಿಶತದಷ್ಟು ಶಿಕ್ಷಕರು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಆನ್‌ಲೈನ್ ಬೋಧನೆಯಲ್ಲಿ ತೃಪ್ತರಾಗಿಲ್ಲ. ಅವರಲ್ಲಿ ಒಂಬತ್ತು ಪ್ರತಿಶತದಷ್ಟು ಜನರು ಶಿಕ್ಷಣದ ವಿಧಾನದ ಬಗ್ಗೆ ಸಂಪೂರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ಭಾನುವಾರ ಹೇಳಿದೆ.
ಮಕ್ಕಳ ಹಕ್ಕುಗಳ ರಕ್ಷಣೆಯ ದೆಹಲಿ ಆಯೋಗದ (DCPCR) ಮೊದಲ ಜರ್ನಲ್- ಚಿಲ್ಡ್ರನ್ ಫಸ್ಟ್: ಜರ್ನಲ್ ಆನ್ ಚಿಲ್ಡ್ರನ್ಸ್ ಲೈವ್ಸ್‌ನಲ್ಲಿ (Children First: Journal on Children's Lives) ಪ್ರಕಟವಾದ ಆನ್‌ಲೈನ್ ಸಮೀಕ್ಷೆಯಲ್ಲಿ ಒಟ್ಟು 220 ಶಾಲೆಯ ಶಿಕ್ಷಕರು ಭಾಗಿಯಾಗಿದ್ದರು. ಅವರಲ್ಲಿ ಎಂಟು ಶಿಕ್ಷಕರು ಸೇರಿದಂತೆ 20 ಜನರನ್ನು ಸಂದರ್ಶಿಸಲಾಗಿತ್ತು.
ಬಹುಪಾಲು ಶಿಕ್ಷಕರು (ಶೇ 43) ಸಾಂಕ್ರಾಮಿಕದ ಸಮಯದಲ್ಲಿನ ಆನ್‌ಲೈನ್‌ನಲ್ಲಿ ಬೋಧನೆಯಲ್ಲಿ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ ಮತ್ತು ಭಾಗವಹಿಸಿದ್ದವರಲ್ಲಿ ಶೇ ಒಂಬತ್ತರಷ್ಟು ಜನರು ಸಂತೋಷವಾಗಿರಲಿಲ್ಲ ಎಂದಿರುವುದಾಗಿ ಸಮೀಕ್ಷೆ ಹೇಳಿದೆ.
ಸಾಂಕ್ರಾಮಿಕ ರೋಗದಿಂದಾಗಿ ನಡೆಯುತ್ತಿದ್ದ ಆನ್‌ಲೈನ್‌ನಲ್ಲಿ ಬೋಧನೆಯಲ್ಲಿ ಗೈರುಹಾಜರಿ (ಶೇ 14), ವಿಶೇಷ ಅಗತ್ಯವಿರುವ ಮಕ್ಕಳನ್ನು ಪರಿಗಣಿಸದಿರುವುದು (ಶೇ 21), ವಿದ್ಯಾರ್ಥಿಗಳ ಕಡಿಮೆ ಗಮನ (ಶೇ 28), ವಿದ್ಯಾರ್ಥಿಗಳಿಂದ ವ್ಯಕ್ತಪಡಿಸಲಾದ ಭಾವನಾತ್ಮಕ ಸಮಸ್ಯೆಗಳು (ಶೇ 19), ಮತ್ತು ನೀಡಿದ್ದ ಅಸೈನ್‌ಮೆಂಟ್ ಅಥವಾ ಇತರೆ ಕೆಲಸಗಳು ವಿದ್ಯಾರ್ಥಿಗಳಿಂದ ಪೂರ್ಣಗೊಂಡಿಲ್ಲ (ಶೇ 10) ಎಂಬುದನ್ನು ಪ್ರಮುಖವಾಗಿ ಶಿಕ್ಷಕರು ಗುರುತಿಸಿದ್ದಾರೆ.
ಶಾಲಾ ಶಿಕ್ಷಣದಲ್ಲಿ ಪೋಷಕರ ಒಳಗೊಳ್ಳುವಿಕೆ ಅಗತ್ಯವಿದೆ ಎಂದು ಶಿಕ್ಷಕರು ಒತ್ತಿ ಹೇಳಿದರು. ಏಕೆಂದರೆ ಅವರು ಮಾತ್ರ ಮಕ್ಕಳೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತಾರೆ ಮತ್ತು ಈ ಅವಧಿಯಲ್ಲಿ ಮಕ್ಕಳೊಂದಿಗೆ ಅವರು ನೇರವಾಗಿ ತೊಡಗಿಸಿಕೊಳ್ಳಬಹುದು.
ಸ್ನೇಹಿತರನ್ನು ಭೇಟಿಯಾಗುವುದು, ಜನರೊಂದಿಗೆ ಸಂವಹನ ನಡೆಸುವುದು, ಸಂಭ್ರಮಾಚರಣೆ, ಸ್ನೇಹ ಸಂಬಂಧ ಸೇರಿದಂತೆ ಹಲವು ಶಾಲಾ ಚಟುವಟಿಕೆಗಳನ್ನು ಕಳೆದುಕೊಂಡಿರುವುದಾಗಿ ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ಪ್ರಕಾರ, ಭಾಗವಹಿಸಿದ್ದ ಕೆಲವರು ಶೈಕ್ಷಣಿಕ ಚಟುವಟಿಕೆಗಳ ಭಾರ ಜಾಸ್ತಿಯಾಗಿರುವುದಾಗಿಯೂ ತಿಳಿಸಿದ್ದಾರೆ.
ಶಿಕ್ಷಕರು ಕೂಡ ಆನ್‌ಲೈನ್ ಬೋಧನಾ ವೇಳಾಪಟ್ಟಿಯನ್ನು ಅನುಸರಿಸುವ ಮತ್ತು ತಮ್ಮ ಮನೆಯಿಂದಲೇ ತಮ್ಮ ಜವಾಬ್ದಾರಿಗಳನ್ನು ಪೂರೈಸುವಲ್ಲಿನ ಸವಾಲುಗಳನ್ನು ಹಂಚಿಕೊಂಡಿದ್ದಾರೆ.
ಆನ್‌ಲೈನ್ ತರಗತಿಗಳ ಯಶಸ್ವಿ ಪರಿವರ್ತನೆಗಾಗಿ ಕೆಲವು ವಿಷಯಗಳು ಅಗತ್ಯವೆಂದು ಸಮೀಕ್ಷೆ ತೀರ್ಮಾನಿಸಿದ್ದು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಲಭ್ಯತೆ ಮತ್ತು ಕೈಗೆಟುಕುವ ಸಾಮರ್ಥ್ಯ, ಅಗತ್ಯ-ಆಧಾರಿತ ಪಠ್ಯಕ್ರಮ ಮತ್ತು ಬೋಧನ ಕಲೆ ಮತ್ತು ಕಲಿಕಾ ಸಮುದಾಯದ ಸಾಮರ್ಥ್ಯ ನಿರ್ಮಾಣ ಅಗತ್ಯ. ಈ ಸಾಂಕ್ರಾಮಿಕದ ಸಮಯದಲ್ಲಿ ಈ ಅಗತ್ಯಗಳ ಪೂರೈಕೆಯು ಆನ್‌ಲೈನ್ ಕಲಿಕೆಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ ಎಂದು ಅದು ಹೇಳಿದೆ.