ದೆಹರಾಡೂನ್: ನಿಗದಿತ ಘಾಟ್ ಗಳು ಮತ್ತು ಹರಿದ್ವಾರದ ಕೆಲ ಪ್ರದೇಶಗಳನ್ನು ಹೊರತುಪಡಿಸಿ ಗಂಗಾ ನದಿಯಲ್ಲಿ ವಿಗ್ರಹ ವಿಸರ್ಜನೆ ಮಾಡಿದರೆ 50,000 ರೂ. ದಂಡ ವಿಧಿಸಲಾಗುವುದು. ಅಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ರಾಷ್ಟ್ರೀಯ ಹಸಿರು ಪ್ರಾಧಿಕಾರದ ನಿರ್ದೇಶನ ಅನ್ವಯ ಹರಿದ್ವಾರ ಜಿಲ್ಲಾಡಳಿತ ಈ ಸೂಚನೆ ಹೊರಡಿಸಿದೆ. ಹಬ್ಬದ ಸಂಭ್ರಮ ಜಾರಿಯಲ್ಲಿರುವುದರಿಂದ ಹರಿದ್ವಾರದಲ್ಲಿ ವಿಗ್ರಹ ವಿಸರ್ಜನೆ ಮಾಡಲೆಂದೇ ಮೂರು ಸ್ಥಳಗಳನ್ನು ನಿಗದಿ ಪಡಿಸಲಾಗಿದೆ.
ದುರ್ಗಾ ಪೂಜೆ ಸಂದರ್ಭದಲ್ಲಿ ವಿಗ್ರಹ ವಿಸರ್ಜನೆಯಿಂದಾಗಿ ನದಿ ನೀರು ವಿಪರೀತ ಕಲುಷಿತಗೊಂಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.