ತಿರುವನಂತಪುರ: ಕೋವಿಡ್ ನಿಂದ ಮೃತಪಟ್ಟ ಸಂತ್ರಸ್ತರ ಅವಲಂಬಿಸಿರುವ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 5,000 ರೂಪಾಯಿ ಪಾವತಿಸಲು ಆದೇಶ ಹೊರಡಿಸಲಾಗಿದೆ. ಸಹಾಯಧನ ಮೂರು ವರ್ಷಗಳವರೆಗೆ ಇರುತ್ತದೆ. ಸಾಮಾಜಿಕ ಭದ್ರತೆ, ಕಲ್ಯಾಣ ನಿಧಿ ಮತ್ತು ಇತರ ಪಿಂಚಣಿಗಳನ್ನು ಪಡೆಯಲು ಇದರಿಂದ ಅಡ್ಡಿಯಾಗುವುದಿಲ್ಲ.
ಮೃತರ ಕುಟುಂಬವು ರಾಜ್ಯ ಮತ್ತು ದೇಶದ ಒಳ-ಹೊರ ಎಲ್ಲೇ ನೆಲಸಿದ್ದರೂ ಈ ನೆರವನ್ನು ನೀಡಲಾಗುತ್ತದೆ. ಕುಟುಂಬದ ಆದಾಯದ ಮಾನದಂಡ ನಿರ್ಧರಿಸುವಾಗ ಮೃತರಾದವರ ಹೆಸರನ್ನು ಪರಿಗಣಿಸಲಾಗುವುದಿಲ್ಲ. ಪೋಷಕರು ಕೋವಿಡ್ ನಿಂದ ಸಾವನ್ನಪ್ಪಿದ್ದರೆ ಮಕ್ಕಳು ತಿಂಗಳಿಗೆ 2000 ರೂ.ಗಳ ಆರ್ಥಿಕ ಸಹಾಯವನ್ನು ಈಗಾಗಲೇ ಪಡೆಯುತ್ತಿದ್ದರೆ, ಈ ನೆರವು ಲಭ್ಯವಿರುವುದಿಲ್ಲ.