HEALTH TIPS

ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕ್ ಪ್ರಜೆ ಬಂಧನ: 6 ಕೆಜಿ ಹೆರಾಯಿನ್ ವಶ

            ಅಮೃತಸರಭಾರತ- ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಸ್ಮಗ್ಲರ್ ಒಬ್ಬನನ್ನು ಭಾನುವಾರ ಬಂಧಿಸಿರುವ ಬಿಎಸ್‌ಎಫ್ ಯೋಧರು, ಆತನಿಂದ ಆರು ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.

             ಇಂಡೋ-ಪಾಕ್ ಗಡಿ ಪ್ರದೇಶ ರಾಜಟಲ್ ಗ್ರಾಮದಲ್ಲಿ ಮುಳ್ಳು ಬೇಲಿಯತ್ತ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿರುವುದನ್ನು ಬಿಎಸ್ ಎಫ್ ಗಸ್ತು ಸಿಬ್ಬಂದಿ ಶನಿವಾರ ಗಮನಿಸಿದ್ದಾರೆ.

              ಶೋಧ ಕಾರ್ಯಾಚರಣೆ ವೇಳೆಯಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬವನ್ನು ಬಿಎಸ್ ಎಫ್ ಸಿಬ್ಬಂದಿ ಬಂಧಿಸಿದ್ದು, ಆತನಿಂದ 6 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್ ಎಫ್ ಡಿಐಜಿ ಭೂಪೀಂದರ್ ಸಿಂಗ್ ತಿಳಿಸಿದ್ದಾರೆ.

              ಪಾಕಿಸ್ತಾನದ ಪ್ರಜೆಯನ್ನು ಲಾಹೋರ್ ನಿವಾಸಿ ಕಾಶಿ ಅಲಿ ಎಂದು ಗುರುತಿಸಲಾಗಿದೆ. ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಡಿಐಜಿ ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries