ತಿರುವನಂತಪುರ: ರಾಜ್ಯದಲ್ಲಿ ಇಂದು 6664 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1168, ತಿರುವನಂತಪುರಂ 909, ಕೊಲ್ಲಂ 923, ತ್ರಿಶೂರ್ 560, ಕೋಝಿಕ್ಕೋಡ್ 559, ಇಡುಕ್ಕಿ 449, ಕಣ್ಣೂರು 402, ಮಲಪ್ಪುರಂ 396, ಪತ್ತನಂತಿಟ್ಟ 392, ಕೊಟ್ಟಾಯಂ 340, ಪಾಲಕ್ಕಾಡ್ 306, ಆಲಪ್ಪುಳ 217, ವಯನಾಡ್ 194 ಮತ್ತು ಕಾಸರಗೋಡು 149 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 61,202 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ 10 ಕ್ಕಿಂತ ಮೇಲಿನ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್‍ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2,65,995 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 2,57,429 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 8752 ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 624 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 74,735 ಕೋವಿಡ್ ಪ್ರಕರಣಗಳಲ್ಲಿ, ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 53 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಜೊತೆಗೆ, ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಒಂಬತ್ತು ಸಾವುಗಳು ಮತ್ತು ಸಮರ್ಪಕ ದಾಖಲೆಗಳ ಕೊರತೆಯಿಂದ ಕಳೆದ ವರ್ಷ ಜೂನ್ 18 ರವರೆಗೆ 219 ಸಾವುಗಳು ಸಂಭವಿಸಿದ್ದು, ಪ್ರಕಟಿಸಲು ಬಾಕಿಯಿದ್ದು ಈಗಿದನ್ನು ಸೇರಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 28,873 ಕ್ಕೆ ಏರಿಕೆಯಾಗಿದೆ. .
ಇಂದು, ಸೋಂಕು ಪತ್ತೆಯಾದವರಲ್ಲಿ 20 ಮಂದಿ ರಾಜ್ಯದ ಹೊರಗಿಂದ ಬಂದವರು. 6356 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 229 ಮಂದಿಯ ಸಂಪರ್ಕ ಮೂಲವು ಸ್ಪಷ್ಟವಾಗಿಲ್ಲ. 59 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 9010 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1081, ಕೊಲ್ಲಂ 1079, ಪತ್ತನಂತಿಟ್ಟ 475, ಆಲಪ್ಪುಳ 360, ಕೊಟ್ಟಾಯಂ 718, ಇಡುಕ್ಕಿ 445, ಎರ್ನಾಕುಳಂ 1453, ತ್ರಿಶೂರ್ 953, ಪಾಲಕ್ಕಾಡ್ 326, ಮಲಪ್ಪುರಂ 345, ಕೋಝಿಕ್ಕೋಡ್ 984, ವಯನಾಡ್ 242, ಕಣ್ಣೂರು 414, ಕಾಸರಗೋಡು 135 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 74,735 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 48,17,785 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.