ತಿರುವನಂತಪುರಂ: ರಾಜ್ಯದಲ್ಲಿ ಇಂದು ಕೋವಿಡ್ ಸೋಂಕಿತರಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇಂದು 6676 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1199, ತಿರುವನಂತಪುರ 869, ಕೋಝಿಕ್ಕೋಡ್ 761, ತ್ರಿಶೂರ್ 732, ಕೊಲ್ಲಂ 455, ಕಣ್ಣೂರು 436, ಮಲಪ್ಪುರಂ 356, ಕೊಟ್ಟಾಯಂ 350, ಪಾಲಕ್ಕಾಡ್ 327, ಆಲಪ್ಪುಳ 316, ಇಡುಕ್ಕಿ 268, ಪತ್ತನಂತಿಟ್ಟ 245, ವಯನಾಡ್ 214 ಮತ್ತು ಕಾಸರಗೋಡು 148 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 68,668 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತವು (WIPR) 10 ಕ್ಕಿಂತ ಹೆಚ್ಚಿನ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್‌ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3,02,818 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 2,92,736 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 10,082 ಮಂದಿ ಆಸ್ಪತ್ರೆ ಮೇಲ್ವಿಚಾರಣೆಯಲ್ಲಿದ್ದಾರೆ. ಒಟ್ಟು 634 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ, 83,184 ಕೋವಿಡ್ ಪ್ರಕರಣಗಳಲ್ಲಿ, ಶೇಕಡಾ 10.2 ರಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 60 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಒಟ್ಟು ಸಾವಿನ ಸಂಖ್ಯೆ 26,925 ಕ್ಕೆ ಏರಿಕೆಯಾಗಿದೆ.
ಇಂದು,ಸೋಂಕು ಪತ್ತೆಯಾದವರಲ್ಲಿ 34 ಮಂದಿ ಹೊರ ರಾಜ್ಯದಿಂದ ಬಂದವರು. 6331 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 267 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 44 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,023 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1174, ಕೊಲ್ಲಂ 1010, ಪತ್ತನಂತಿಟ್ಟ 603, ಆಲಪ್ಪುಳ 404, ಕೊಟ್ಟಾಯಂ 1079, ಇಡುಕ್ಕಿ 430, ಎರ್ನಾಕುಳಂ 1015, ತ್ರಿಶೂರ್ 1602, ಪಾಲಕ್ಕಾಡ್ 781, ಮಲಪ್ಪುರಂ 790, ಕೋಝಿಕ್ಕೋಡ್ 1011, ವಯನಾಡ್ 367, ಕಣ್ಣೂರು 611 ಮತ್ತು ಕಾಸರಗೋಡು 146 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 83,184 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 47,50,293 ಮಂದಿ ಈವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.