ನವದೆಹಲಿ: ಶೇ.69 ರಷ್ಟು ವಯಸ್ಕರಿಗೆ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದ್ದರೆ ಶೇ.25 ರಷ್ಟು ಮಂದಿಗೆ ಎರಡೂ ಲಸಿಕೆ ಲಭ್ಯವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಜನಸಂಖ್ಯೆ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಸಾಧ್ಯತೆ ಹೆಚ್ಚಿದ್ದು ಅನಗತ್ಯ ಪ್ರಯಾಣಗಳನ್ನು ತಪ್ಪಿಸುವುದು, ಹಬ್ಬಗಳನ್ನು ಅತ್ಯಂತ ಕಡಿಮೆ ಜನರೊಂದಿಗೆ ಆಚರಣೆ ಮಾಡುವುದು ಉತ್ತಮ ಎಂದು ಸರ್ಕಾರ ಸಲಹೆ ನೀಡಿದೆ.
ಗ್ರಾಮೀಣ ಭಾಗಗಳ ಲಸಿಕಾ ಕೇಂದ್ರಗಳಲ್ಲಿ ಶೇ.64.1 ರಷ್ಟು ಡೋಸ್ ಗಳನ್ನು ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಶೇ.35 ರಷ್ಟು ಲಸಿಕೆ ನೀಡಲಾಗಿದೆ. ನಗರ/ ಗ್ರಾಮೀಣ ಎಂಬ ವಿಭಾಗ ಇಲ್ಲದೇ ಇರುವ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ 67.4 ಲಕ್ಷ ಡೋಸ್ ಗಳನ್ನು (0.88 ಪಿಸಿ)
ಶೇ.59.66 ರಷ್ಟು ಕೋವಿಡ್-19 ಲಸಿಕೆಗಳು ಕೇರಳದಿಂದ ವರದಿಯಾಗಿದೆ, ಕೋವಿಡ್-19 ಪರೀಕ್ಷೆ ಕಡಿಮೆ ಮಾಡಲಾಗಿಲ್ಲ. ಪ್ರತಿ ದಿನ 15-16 ಲಕ್ಷಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.