ತಿರುವನಂತಪುರಂ: ರಾಜ್ಯದಲ್ಲಿ ಇಂದು 7555 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 998, ಎರ್ನಾಕುಳಂ 975, ತಿರುವನಂತಪುರ 953, ಕೋಝಿಕ್ಕೋಡ್ 746, ಕೊಟ್ಟಾಯಂ 627, ಕೊಲ್ಲಂ 604, ಕಣ್ಣೂರು 446, ಮಲಪ್ಪುರಂ 414, ಪತ್ತನಂತಿಟ್ಟ 377, ಇಡುಕ್ಕಿ 365, ಪಾಲಕ್ಕಾಡ್ 345, ಆಲಪ್ಪುಳ 303, ವಯನಾಡ್ 271 ಮತ್ತು ಕಾಸರಗೋಡು 131 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 73,157 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹೆಚ್ಚಿರುವ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3,11,361 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಇವರಲ್ಲಿ 3,01,156 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 10,205 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 901 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ 87,593 ಕೋವಿಡ್ ಪ್ರಕರಣಗಳಲ್ಲಿ, ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಫೀಲ್ಡ್ ಆಸ್ಪತ್ರೆಗಳಲ್ಲಿದ್ದಾರೆ.
ಕೋವಿಡ್ ಬಾಧಿಸಿದವರ ಪ್ಯೆಕಿ ಕಳೆದ 24 ಗಂಟೆಗಳಲ್ಲಿ 74 ಮಂದಿ ಮೃತರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 26,865 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಗುರುತಿಸಿದವರಲ್ಲಿ 44 ಜನರು ರಾಜ್ಯದ ಹೊರಗಿಂದ ಬಂದವರು. 7162 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 278 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 71 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ, 10,773 ಮಂದಿ ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 1213, ಕೊಲ್ಲಂ 549, ಪತ್ತನಂತಿಟ್ಟ 746, ಅಲಪ್ಪುಳ 546, ಕೊಟ್ಟಾಯಂ 546, ಇಡುಕ್ಕಿ 613, ಎರ್ನಾಕುಳಂ 1671, ತ್ರಿಶೂರ್ 1172, ಪಾಲಕ್ಕಾಡ್ 681, ಮಲಪ್ಪುರಂ 907, ಕೋಝಿಕ್ಕೋಡ್ 977, ವಯನಾಡ್ 420, ಕಣ್ಣೂರು 601 ಮತ್ತು ಕಾಸರಗೋಡು 131 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 87,593 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 47,39,270 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.