ತಿರುವನಂತಪುರಂ: ಕೇರಳದಲ್ಲಿ ಇಂದು 7643 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 1017, ತಿರುವನಂತಪುರ 963, ಎರ್ನಾಕುಳಂ 817, ಕೋಝಿಕ್ಕೋಡ್ 787, ಕೊಟ್ಟಾಯಂ 765, ಪಾಲಕ್ಕಾಡ್ 542, ಕೊಲ್ಲಂ 521, ಕಣ್ಣೂರು 426, ಪತ್ತನಂತಿಟ್ಟ 424, ಇಡುಕ್ಕಿ 400, ಮಲಪ್ಪುರಂ 353, ಆಲಪ್ಪುಳ 302, ವಯನಾಡ್ 185 ಮತ್ತು ಕಾಸರಗೋಡು 141 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 82,408 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2,92,178 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 2,83,368 ಮಂದಿ ಜನರು ಮನೆ / ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 9,810 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 854 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ, 80,262 ಕೋವಿಡ್ ಪ್ರಕರಣಗಳಲ್ಲಿ, ಶೇಕಡಾ 10.4 ರಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 77 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 27,002 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಗುರುತಿಸಿದವರಲ್ಲಿ 44 ಜನರು ರಾಜ್ಯದ ಹೊರಗಿಂದ ಬಂದವರು. 7166 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 353 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಸುಮಾರು 80 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 10,488 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1056, ಕೊಲ್ಲಂ 541, ಪತ್ತನಂತಿಟ್ಟ 520, ಅಲಪ್ಪುಳ 443, ಕೊಟ್ಟಾಯಂ 605, ಇಡುಕ್ಕಿ 540, ಎರ್ನಾಕುಳಂ 2005, ತ್ರಿಶೂರ್ 1247, ಪಾಲಕ್ಕಾಡ್ 595, ಮಲಪ್ಪುರಂ 754, ಕೋಯಿಕ್ಕೋಡ್ 1141, ವಯನಾಡ್ 397, ಕಣ್ಣೂರು 566 ಮತ್ತು ಕಾಸರಗೋಡು 78 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 80,262 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 47,60,781 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.