HEALTH TIPS

ರಾಜ್ಯದಲ್ಲಿ ಇಂದು 7955 ಮಂದಿಗೆ ಕೋವಿಡ್ ಪತ್ತೆ: 11,769 ಮಂದಿ ಗುಣಮುಖ: ಪರೀಕ್ಷಾ ಧನಾತ್ಮಕ ದರ ಶೇ. 9.97

              ತಿರುವನಂತಪುರಂ: ರಾಜ್ಯದಲ್ಲಿ ಇಂದು 7955 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1280, ತಿರುವನಂತಪುರ 985, ಕೋಝಿಕ್ಕೋಡ್ 937, ತ್ರಿಶೂರ್ 812, ಕೊಟ್ಟಾಯಂ 514, ಕೊಲ್ಲಂ 500, ಪಾಲಕ್ಕಾಡ್ 470, ಇಡುಕ್ಕಿ 444, ಮಲಪ್ಪುರಂ 438, ಪತ್ತನಂತಿಟ್ಟ 431, ಕಣ್ಣೂರು 420, ಆಲಪ್ಪುಳ 390, ವಯನಾಡ್ 217 ಮತ್ತು ಕಾಸರಗೋಡು 117 ಎಂಬಂತೆ ಸೋಂಕು ದೃಢಪಡಿಸಲಾಗಿದೆ.

               ಕಳೆದ 24 ಗಂಟೆಗಳಲ್ಲಿ 79,722 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ 10 ಕ್ಕಿಂತ ಹೆಚ್ಚಿರುವ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್‍ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.

              ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3,14,640 ಮಂದಿ  ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 3,04,170 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 10,404 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 713 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

              ಪ್ರಸ್ತುತ, 90,885 ಕೋವಿಡ್ ಪ್ರಕರಣಗಳಲ್ಲಿ, ಕೇವಲ 9.8 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

          ಕಳೆದ 24 ಗಂಟೆಗಳಲ್ಲಿ 57 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 26,791 ಕ್ಕೆ ಏರಿಕೆಯಾಗಿದೆ.

       ಇಂದು, ಸೋಂಕು ಪತ್ತೆಯಾದವರಲ್ಲಿ 27 ಮಂದಿ ರಾಜ್ಯದ ಹೊರಗಿಂದ ಬಂದವರು. 7562 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 321 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ನಲವತ್ತೈದು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ. 

             ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,769 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1351, ಕೊಲ್ಲಂ 1039, ಪತ್ತನಂತಿಟ್ಟ 428, ಆಲಪ್ಪುಳ 552, ಕೊಟ್ಟಾಯಂ 577, ಇಡುಕ್ಕಿ 666, ಎರ್ನಾಕುಳಂ 1512, ತ್ರಿಶೂರ್ 1304, ಪಾಲಕ್ಕಾಡ್ 790, ಮಲಪ್ಪುರಂ 681, ಕೋಝಿಕ್ಕೋಡ್ 1694, ವಯನಾಡ್ 312, ಕಣ್ಣೂರು 656 ಮತ್ತು ಕಾಸರಗೋಡು 207 ಗುಣಮುಖರಾಗಿದ್ದಾರೆ. ಇದರೊಂದಿಗೆ, 90,885 ಮಂದಿ ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 47,28,497 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries