HEALTH TIPS

ಯೋಗ ಫಾರ್ ಕಿಡ್ಸ್ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ : 7 ಮಂದಿ ಕೇರಳ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

               ಕಾಸರಗೋಡು: ಆರನೇ ಕಾಸರಗೋಡು ಜಿಲ್ಲಾ ಮಟ್ಟದ ಯೋಗ ಸ್ಪೋಟ್ಸ್ ಚಾಂಪಿಯನ್ ಶಿಪ್ - 2021 ರಲ್ಲಿ ಯೋಗ ಶಿಕ್ಷಕಿ ತೇಜ ಕುಮಾರಿ ಅವರ ನಿರ್ದೇಶನದ ಕರಂದಕ್ಕಾಡ್‍ನ ಯೋಗ ಫಾರ್ ಕಿಡ್ಸ್ ಇದರ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ. ಈ ಸಂಸ್ಥೆಯ 7 ಮಂದಿ ವಿದ್ಯಾರ್ಥಿಗಳು ಮಲಪ್ಪುರಂನ ತಿರೂರಿನಲ್ಲಿ ನಡೆಯಲಿರುವ ಕೇರಳ ರಾಜ್ಯ ಮಟ್ಟದ ಯೋಗ ಸ್ಪ|ರ್ಧೆಗೆ ಆಯ್ಕೆಯಾಗಿದ್ದಾರೆ. 

                ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯದ 6 ನೇ ತರಗತಿಯ ವಿದ್ಯಾರ್ಥಿಗಳಾದ ಅಭಿಜ್ಞಾ, ಕೌಸ್ತುಭ್, ಚಿನ್ಮಯ ವಿದ್ಯಾಲಯದ 2 ನೇ ತರಗತಿ ವಿದ್ಯಾರ್ಥಿನಿ ಸಮೃದ್ಧಿ ಕಾಮತ್, ಪಾಯಿಚ್ಚಾಲಿನ ಚೈತನ್ಯ ವಿದ್ಯಾಲಯದ 8 ನೇ ತರಗತಿ ವಿದ್ಯಾರ್ಥಿ ಘನಶ್ಯಾಮ್, ಬಿಇಎಂ ಹೈಸ್ಕೂಲ್‍ನ 10 ನೇ ತರಗತಿ ವಿದ್ಯಾರ್ಥಿ ಧನುಶ್, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಶ್ವಥಿ ಹಾಗು ಶಿಕ್ಷಕಿ ತೇಜ ಕುಮಾರಿ ಅವರು ಆಯ್ಕೆಯಾಗಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries