HEALTH TIPS

ರಾಜ್ಯದಲ್ಲಿ ಇಂದು 8867 ಮಂದಿಗೆ ಕೋವಿಡ್ ಪತ್ತೆ: 9872 ಮಂದಿ ಗುಣಮುಖ: 79,554 ಮಾದರಿಗಳ ಪರೀಕ್ಷೆ: ಪರೀಕ್ಷಾ ಧನಾತ್ಮಕ ದರ ಶೇ.11.14

                                                 

              ತಿರುವನಂತಪುರಂ: ರಾಜ್ಯದಲ್ಲಿ ಇಂದು 8867 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1377, ತಿರುವನಂತಪುರಂ 1288, ತ್ರಿಶೂರ್ 1091, ಕೋಝಿಕ್ಕೋಡ್ 690, ಕೊಟ್ಟಾಯಂ 622, ಕೊಲ್ಲಂ 606, ಮಲಪ್ಪುರಂ 593, ಅಲಪ್ಪುಳ 543, ಕಣ್ಣೂರು 479, ಇಡುಕ್ಕಿ 421, ಪಾಲಕ್ಕಾಡ್ 359, ಪತ್ತನಂತಿಟ್ಟ 291, ವಯನಾಡ್ 286 ಮತ್ತು ಕಾಸರಗೋಡು 221 ಎಂಬಂತೆ ಕೋವಿಡ್ ದೃಢೀಕರಿಸಲಾಗಿದೆ. 

                ಕಳೆದ 24 ಗಂಟೆಗಳಲ್ಲಿ 79,554 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ  10 ಕ್ಕಿಂತ ಹೆಚ್ಚಿರುವ 158 ಸ್ಥಳೀಯಾಡಳಿತ  ಸಂಸ್ಥೆಗಳಲ್ಲಿ 211 ವಾರ್ಡ್‍ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.

               ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3,27,682 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಇವುಗಳಲ್ಲಿ 3,17,060 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 10,622 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 781 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                ಪ್ರಸ್ತುತ, 94,756 ಕೋವಿಡ್ ಪ್ರಕರಣಗಳಲ್ಲಿ, ಕೇವಲ 9.8 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

          ಕಳೆದ 24 ಗಂಟೆಗ|ಳಲ್ಲಿ ಕೋವಿಡ್ ಬಾಧಿಸಿ  67 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 26,734 ಕ್ಕೆ ಏರಿಕೆಯಾಗಿದೆ. ಇಂದು, ಸೋಂಕು ಪತ್ತೆಯಾದವರಲ್ಲಿ 32 ಮಂದಿ ಜನರು ಹೊರ ರಾಜ್ಯದಿಂದ ಬಂದವರು. 8434 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 337 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 64 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಇಂದು ಸೋಂಕು ದೃಢಪಟ್ಟಿದೆ. 

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 9872 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1462, ಕೊಲ್ಲಂ 690, ಪತ್ತನಂತಿಟ್ಟ 544, ಆಲಪ್ಪುಳ 572, ಕೊಟ್ಟಾಯಂ 680, ಇಡುಕ್ಕಿ 370, ಎರ್ನಾಕುಳಂ 1641, ತ್ರಿಶೂರ್ 1296, ಪಾಲಕ್ಕಾಡ್ 582, ಮಲಪ್ಪುರಂ 750, ಕೋಝಿಕ್ಕೋಡ್ 377, ವಯನಾಡ್ 91, ಕಣ್ಣೂರು 681 ಮತ್ತು ಕಾಸರಗೋಡು 136 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 94,756 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು,  ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 47,16,728 ಮಂದಿ ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries