ತಿರುವನಂತಪುರಂ: ರಾಜ್ಯದಲ್ಲಿ ಇಂದು 9445 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1517, ತಿರುವನಂತಪುರ 1284, ಕೋಝಿಕ್ಕೋಡ್ 961, ತ್ರಿಶೂರ್ 952, ಕೊಟ್ಟಾಯಂ 840, ಕೊಲ್ಲಂ 790, ಇಡುಕ್ಕಿ 562, ಪತ್ತನಂತಿಟ್ಟ 464, ಮಲಪ್ಪುರಂ 441, ಕಣ್ಣೂರು 422, ಪಾಲಕ್ಕಾಡ್ 393, ಆಲಪ್ಪುಳ 340, ವಯನಾಡ್ 333, ಕಾಸರಗೋಡು 146 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 82,689 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್ ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,68,639 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 2,60,359 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 8,280 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 619 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 76,554 ಕೋವಿಡ್ ಪ್ರಕರಣಗಳಲ್ಲಿ, ಕೇವಲ 9.4 ಶೇಕಡಾವನ್ನು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 93 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಹೆಚ್ಚುವರಿಯಾಗಿ, ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮೇಲ್ಮನವಿಯಲ್ಲಿ 199 ಸಾವುಗಳು ವರದಿಯಾಗಿವೆ ಮತ್ತು ಜೂನ್ 18 ರವರೆಗೆ 330 ಸಾವುಗಳು ವರದಿಯಾಗಿವೆ. ಸಮರ್ಪಕ ದಾಖಲೆಗಳ ಕೊರತೆಯಿಂದಾಗಿ ದೃಢೀಕರಿಸಲಾಗಿರಲಿಲ್ಲ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 29,977ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 28 ಮಂದಿ ಹೊರ ರಾಜ್ಯದವರು. 9069 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 297 ಮಂದಿಯ ಸಂಪರ್ಕ ಮೂಲವು ಸ್ಪಷ್ಟವಾಗಿಲ್ಲ. 51 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಇಂದು ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 6723 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 476, ಕೊಲ್ಲಂ 1230, ಪತ್ತನಂತಿಟ್ಟ 423, ಆಲಪ್ಪುಳ 371, ಕೊಟ್ಟಾಯಂ 251, ಇಡುಕ್ಕಿ 125, ಎರ್ನಾಕುಲಂ 884, ತ್ರಿಶೂರ್ 987, ಪಾಲಕ್ಕಾಡ್ 450, ಮಲಪ್ಪುರಂ 277, ಕೋಝಿಕ್ಕೋಡ್ 53130, ವಯನಾಡ್ 210, ಕಣ್ಕಾಣೂರು 368, ಕಾಸರಗೋಡು 139 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 76,554 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 48,31,468 ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.