HEALTH TIPS

ಬ್ರಾ ಸ್ಟ್ರಾಪ್ ನಿಂದ ಭುಜದಲ್ಲಿ ಗೆರೆಗಳು ಉಂಟಾಗಿದೆಯಾ? ಹಾಗಾದ್ರೆ ಈ ರೀತಿ ಮಾಡಿ

                   ಕೆಲವೊಮ್ಮೆ ಮಹಿಳೆಯರು ಬಟ್ಟೆ ಅಥವಾ ಬ್ರಾನಂತಹ ಒಳಉಡುಪನ್ನು ಧರಿಸಿದಾಗ, ಬೆನ್ನು ಹಾಗೂ ಭುಜದ ಭಾಗದಲ್ಲಿ ಕೆಲವೊಂದು ಕಲೆಗಳನ್ನು ಕಾಣುತ್ತಾರೆ. ಇದನ್ನೇ ಸಾಮಾನ್ಯವಾಗಿ ಟ್ಯಾನಿಂಗ್ ಎನ್ನುವುದು. ಇದರಿಂದ ಮರುದಿನ ಯಾವುದೇ ಸ್ಲೀವ್ ಲೆಸ್ ಬಟ್ಟೆ ಧರಿಸಲು ಮುಜುಗರ ಉಂಟಾಗುವುದು ಸುಳ್ಳಲ್ಲ. ಆದ್ದರಿಂದ ನಾವಿಂದು ಇಂತಹ ಟ್ಯಾನ್ ಆದ ಚರ್ಮವನ್ನು ಸರಿಪಡಿಸುವ ಕೆಲವೊಂದು ಮನೆಮದ್ದುಗಳನ್ನು ವಿವರಿಸುತ್ತೇವೆ. ಇದರಿಂದ ಬ್ರಾನಿಂದ ಆದ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

                     ನಿಂಬೆ ಮತ್ತು ಜೇನುತುಪ್ಪ ಪ್ಯಾಕ್:

             ಬ್ರಾ ಅಥವಾ ಇನ್ನಾವುದೇ ಉಡುಪು ಧರಿಸಿದ್ದರಿಂದ ಉಂಟಾಗುವ ಟ್ಯಾನ್ ಕಲೆಗಳನ್ನು ತೆಗೆಯಲು ಈ ಎರಡು ವಸ್ತುಗಳು ಸಹಾಯಕ್ಕೆ ಬರುತ್ತವೆ. ಇದಕ್ಕಾಗಿ 2 ಚಮಚ ಜೇನುತುಪ್ಪ ಮತ್ತು ಅರ್ಧ ನಿಂಬೆ ರಸವನ್ನು ಮಿಶ್ರಣ ಮಾಡಿ. ನಿಂಬೆ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಟ್ಯಾನಿಂಗ್ ವಿರುದ್ಧ ಜೇನುತುಪ್ಪ ಹೋರಾಡುತ್ತದೆ. ಈ ಪೇಸ್ಟ್ ಅನ್ನು ನಿಮ್ಮ ಎರಡೂ ಭುಜಗಳ ಮೇಲೆ ಹಚ್ಚಿ. ಕೇವಲ ಟ್ಯಾನ್ ಆದ ಜಾಗಕ್ಕೆ ಅಲ್ಲ, ಭುಜದ ಸುತ್ತಲೂ ಹಚ್ಚಿ, ಅರ್ಧ ಘಂಟೆಯವರೆಗೆ ಬಿಡಿ, ನಂತರ ಅದನ್ನು ತೊಳೆಯಿರಿ. ನಿಮ್ಮ ಭುಜದ ಮೇಲಿನ ಬದಲಾವಣೆ ನೀವೇ ಗಮನಿಸಿ.

               ಎಕ್ಸ್‌ಫೋಲಿಯೇಟ್: ಉಡುಪಿನಿಂದ ಆದ ಕಲೆಯನ್ನು ಹೋಗಲಾಡಿಸಲು, ಭುಜವನ್ನು ಕಾಫಿ ಸ್ಕ್ರಬ್, ಸಕ್ಕರೆ ಸ್ಕ್ರಬ್ ಅಥವಾ ಉಪ್ಪು ಸ್ಕ್ರಬ್‌ನಿಂದ ಎಕ್ಸ್‌ಫೋಲಿಯೇಟ್ ಮಾಡಬಹುದು. ಈ ವಿಧಾನವು ನಿಮ್ಮ ಬೆನ್ನು-ಭುಜದ ಚರ್ಮದಲ್ಲಿರುವ ಡೆಡ್ ಸೆಲ್ ಗಳನ್ನು ತೆಗೆದುಹಾಕುವುದು. ಇದಕ್ಕಾಗಿ ಸ್ವಲ್ಪ ಕಾಫಿಯನ್ನು ತೆಗೆದುಕೊಂಡು, ಭುಜದ ಮೇಲೆ ತಿಕ್ಕಿ, ಮಸಾಜ್ ಮಾಡಿ, ಸ್ವಲ್ಪ ಹೊತ್ತಿನ ಬಳಿಕ ತೊಳೆಯಿರಿ. ಇದೇ ರೀತಿ ಉಪ್ಪು, ಸಕ್ಕರೆಯನ್ನು ಬಳಸಬಹುದು.

            ಬಾದಾಮಿ ಮತ್ತು ಕಡಲೆಹಿಟ್ಟು: ಈ ಮಿಶ್ರಣವು ಸಹ ನಿಮ್ಮ ಟ್ಯಾನ್ ತೆಗೆಯಲು ಸಹಾಯ ಮಾಡುವುದು. ಮೊದಲಿಗೆ 10 ಬಾದಾಮಿಯನ್ನು ನುಣ್ಣಗೆ ರುಬ್ಬಿಕೊಳ್ಳಿ ಮತ್ತು ಇದಕ್ಕೆ 2 ಚಮಚ ಕಡಲೆ ಹಿಟ್ಟು, 2 ಚಮಚ ನಿಂಬೆ ರಸ ಮತ್ತು ಸ್ವಲ್ಪ ಹಾಲನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪ್ಯಾಕ್ ನಿಮ್ಮ ಚರ್ಮದ ಮೇಲೆ ಅದ್ಭುತಗಳನ್ನು ಮಾಡುವುದು. ಇದು ನಿಮ್ಮ ಚರ್ಮವನ್ನು ಡಿ-ಟ್ಯಾನ್, ಸ್ಕ್ರಬ್, ಮಾಯಿಶ್ಚರೈಸ್ ಮತ್ತು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುವುದು.
             ಮೊಸರು ಮತ್ತು ಅರಿಶಿನ ಪ್ಯಾಕ್: ಈ ಪ್ಯಾಕ್‌ ಗಾಗಿ, 4-5 ಚಮಚ ಮೊಸರು ತೆಗೆದುಕೊಂಡು ಅದಕ್ಕೆ 1 ಚಮಚ ಅರಿಶಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಅನ್ನು ನಿಮ್ಮ ಭುಜದ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ಪ್ಯಾಕ್ ಆರಿದ ನಂತರ, ಅದನ್ನು ಸ್ಕ್ರಬ್ ಮಾಡಿ. ಪ್ಯಾಕ್ ನಿಮ್ಮ ಚರ್ಮವನ್ನು ಬಿಡಲು ಪ್ರಾರಂಭಿಸಿದಾಗ, ಅದು ಸತ್ತ ಚರ್ಮದ ಕೋಶಗಳನ್ನು ತೆಗೆಯುತ್ತದೆ. ಅರಿಶಿನವು ನಂಜುನಿರೋಧಕ ಗುಣಗಳನ್ನು ಹೊಂದಿದ್ದು, ಕಲೆಗಳನ್ನು ತೆಗೆಯುವುದು ಮತ್ತು ಮೊಸರು ಚರ್ಮವನ್ನು ಸ್ವಚ್ಛಗೊಳಿಸಲು ಮತ್ತು ತೇವಾಂಶ ನೀಡಲು ಸಹಾಯ ಮಾಡುತ್ತದೆ.
               ಸನ್ ಸ್ಕ್ರೀನ್ ಹಚ್ಚಿ: ಹೌದು, ಗುಣಪಡಿಸುವುದಕ್ಕಿಂತ ತಡೆಗಟ್ಟುವಿಕೆ ಉತ್ತಮವಾಗಿದೆ, ಆದ್ದರಿಂದ ನೀವು ನಿಮ್ಮ ಭುಜಗಳೂ ಸೇರಿದಂತೆ, ಎಲ್ಲಾ ಪ್ರದೇಶಗಳಲ್ಲಿ ಸಾಕಷ್ಟು ಸನ್ಸ್ಕ್ರೀನ್ ಹಚ್ಚಿ.ಇದು ನಿಮ್ಮ ಚರ್ಮವನ್ನು ಟ್ಯಾನಿಂಗ್ ನಿಂದ ರಕ್ಷಿಸುತ್ತದೆ. ಒಂದು ವೇಳೆ ಟ್ಯಾನ್ ಆದರೂ, ಅದನ್ನು ಸುಲಭವಾಗಿ ತೆಗೆಯಬಹುದು.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries