ಕಾಸರಗೋಡು: ಐಎಂಎ ಕಾಸರಗೋಡು ಶಾಖೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಕುಟುಂಬ ಸಂಗಮ ಕಾರ್ಯಕ್ರಮ ಕಾಸರಗೋಡಿನ ಸಿಟಿ ಟವರ್ ಸಭಾಂಗಣದಲ್ಲಿ ಜರುಗಿತು.
ಐಎಂಎ ಉತ್ತರ ವಲಯ ಅಧ್ಯಕ್ಷ ಡಾ. ಎಂ. ಮುರಳೀಧರನ್ ಉದ್ಘಾಟಿಸಿದರು. ರಾಜ್ಯ ಸಮಿತಿ ಕೋಶಾಧಿಕಾರಿ ಡಾ. ಲಲಿತ್‍ಸುಂದರಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ. ಬಿ.ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಡಾ, ಜನಾರ್ದನ ನಾಯ್ಕ್, ಡಾ, ರಾಕೇಶ್, ಐಎಂಎ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಸುರೇಶ್‍ಬಾಬು, ಡಾ. ಟಿ.ಪಿ ಪದ್ಮನಾಭನ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಕಾಸರಗೋಡಿಗೆ ಸೂಪರ್ ಸ್ಪೆಶ್ಯಾಲಿಟಿ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಎಐಐಎಂಎಸ್ ಮಂಜೂರುಗೊಳಿಸುವುದರೊಂದಿಗೆ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು. ಐಎಂಎ ಕಾಸರಗೋಡು ಶಾಖೆಯ ನೂತನ ಅಧ್ಯಕ್ಷರಾಗಿ ಡಾ. ಬಿ.ಕೃಷ್ಣ ನಾಯ್ಕ್, ಉಪಾಧ್ಯಕ್ಷರಾದ ಡಾ> ಭರತನ್. ಎ, ಡಾ. ರೇಖಾ ರಾಯ್, ಕಾರ್ಯದರ್ಶಿ ಡಾ. ಟಿ.ಕಾಸಿಂ, ಕೋಶಾಧಿಕಾರಿ ಡಾ. ಜಮಾಲುದ್ದೀನ್ ಅವರು ಅಧಿಕಾರ ಸ್ವೀಕರಿಸಿದರು.