ತಿರುವನಂತಪುರಂ: ವಿಜಯದಶಮಿ ದಿನವಾದ ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿ ಪರಂಪರೆ ನೆನಪಿಸಿದರು. ಅಕ್ಷರಾಭ್ಯಾಸದ ಮೊದಲ ದಿನದಂದು, ಅನೇಕ ಮಕ್ಕಳು ಜ್ಞಾನದ ಪ್ರಪಂಚಕ್ಕೆ ತಮ್ಮ ಮೊದಲ ಹೆಜ್ಜೆಗಳನ್ನು ಇಡುತ್ತಾರೆ. ಮಕ್ಕಳಾದ ನೇಹಾ, ನಿಯಾ, ಕಣಿ ಮತ್ತು ಫಿಡೆಲ್ ಕೂಡ ಅಕ್ಷರ ಲೋಕಕ್ಕೆ ಪಾದಾರ್ಪಣೆಗೈದಿರುವರು ಎಂದು ಮುಖ್ಯಮಂತ್ರಿ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಜ್ಞಾನವು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ಅದಕ್ಕಾಗಿಯೇ ಶಿಕ್ಷಣವನ್ನು ಬಹಳ ಮುಖ್ಯವಾದ ಸಾಮಾಜಿಕ ಚಟುವಟಿಕೆಯೆಂದು ಪರಿಗಣಿಸಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ದೀರ್ಘಕಾಲದಿಂದ ಮುಚ್ಚಲ್ಪಟ್ಟ ಶಾಲೆಗಳು ಕೆಲವೇ ದಿನಗಳಲ್ಲಿ ಮತ್ತೆ ತೆರೆಯಲಿರುವುದು ಒಳ್ಳೆಯ ಸುದ್ದಿ.
ನಮ್ಮ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಮತ್ತು ದೇಶಕ್ಕೆ ಉಜ್ವಲ ಭವಿಷ್ಯವನ್ನು ಒದಗಿಸಲು ನಾವು ಒಟ್ಟಾಗಿ ನಿಲ್ಲೋಣ. ಎಲ್ಲರಿಗೂ ಪಿಣರಾಯಿ ವಿಜಯನ್ ಮಹಾನವಮಿ ಮತ್ತು ವಿಜಯದಶಮಿಯ ಶುಭಾಶಯಗಳನ್ನು ಕೋರಿದ್ದಾರೆ.