ಬದಿಯಡ್ಕ: ಹಿರಿಯ ವ್ಯಾಪಾರಿ, ಬದಿಯಡ್ಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಸುಂದರ ಪ್ರಭು ಇವರ ಕುಟುಂಬದ ಆಶ್ರಯದಲ್ಲಿ ನಿವೃತ್ತ ಶಿಕ್ಷಕ 90 ವರ್ಷ ಪ್ರಾಯದ ರಸ ಋಷಿ ಸುಂದರ ಶೆಟ್ರನ್ನು ಗೌರವದಿಂದ ಅಭಿನಂದಿಸುವ ಕಾರ್ಯಕ್ರಮ ನೆಲ್ಲಿಕುಂಜೆಯಲ್ಲಿರುವ ಮನೆಯಲ್ಲಿ ಜರಗಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಕಲೆ, ಸಾಹಿತ್ಯ, ಸಾಂಸ್ಕøತಿಕ, ನಾಟಕ, ಯಕ್ಷಗಾನ, ಕೃಷಿ, ಶಾಲಾ ಹೂದೋಟ,ಶಾಲಾ ನ್ಯಾಯಾಂಗ ಸಹಿತ ಹತ್ತು ಹಲವು ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಮೇಲೆತ್ತಿದ ಅಧ್ಯಾಪಕರಲ್ಲಿ ಸುಂದರ ಶೆಟ್ಟಿ ಒಬ್ಬರು. ಪೆರಡಾಲ ಹಿರಿಯ ಬುನಾದಿ ಶಾಲೆಯನ್ನು ಅವರು ಉತ್ತುಂಗಕ್ಕೇರಿಸಿದವರು. ಹಲವು ವಿದ್ಯಾರ್ಥಿಗಳು ಸುಂದರ ಶೆಟ್ಟಿಯವರ ಮಾರ್ಗದರ್ಶನ ಫಲವಾಗಿ ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸುಂದರ ಪ್ರಭು ಕುಟುಂಬ ಸದಸ್ಯರು ಭಾಗವಹಿಸಿದ್ದರು.