ದೇವಲೋಕದ ಹಣ್ಣುಗಳಲ್ಲಿ ಒಂದಾದ ಸೀತಾಫಲ ಅನೋನಾಸಿ ಕುಟುಂಬಕ್ಕೆ ಸೇರಿದ ರುಚಿಕರವಾದ ಹಣ್ಣು. ಇದೊಂದು ಋತುಮಾನ ಹಣ್ಣಾಗಿದ್ದು, ಇದು ನಮ್ಮ ದೇಹದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು. ಅನೇಕ ಆರೋಗ್ಯ ಸಂಬಂಧಿತ ವಿಷಯಗಳಿಗೆ ಇದು ರಾಮಬಾಣ. ಬಹಳ ಜನರಿಗೆ ಇದು ಪ್ರಿಯವಾದ ಹಣ್ಣು, ಆದರೆ ಈ ಹಣ್ಣಿನ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದಾಗಿ ಬಹುತೇಕರು ಇದನ್ನು ಸೇವಿಸಲು ಯೋಚಿಸುತ್ತಾರೆ, ಸೇವಿಸದೆಯೂ ಇರಬಹುದು.
ಈ ಹಿನ್ನೆಲೆ ನಾವಿಂದು ತಜ್ಞರು ಹೇಳಿರುವ ಪ್ರಕಾರ ಸೀತಾಫಲ ಹಣ್ಣಿನ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಸತ್ಯಾಂಶದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ:
ಹಣ್ಣಿನಲ್ಲಿರುವ ವಿಟಮಿನ್/ಪೋಷಕಾಂಶಗಳು ಸಿತಾಫಲವು ವಿಟಮಿನ್, 1.6%ರಷ್ಟು ಪ್ರೋಟೀನ್, 73.9%ರಷ್ಟು ಶರ್ಕರ, 0.3% ಕೊಬ್ಬು, ಜೀವಸತ್ತ್ವ ಎ, ಸಿ, ಬಿ6, ಮೆಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಕಬ್ಬಿಣ, ಮ್ಯಾಂಗನೀಸ್, ನಿಯಾಸಿನ್ ಮತ್ತು ಡಯಟೆರಿ ಫೈಬರ್, ಅಸಿಟೊಜೆನಿನ್, ರಂಜಕ, ಸೇರಿದಂತೆ ಅನೇಕ ಪೋಷಕಾಂಶಗಳ ಆಗರವಾಗಿದ್ದು ಆರೋಗ್ಯಕ್ಕೆ ಅತ್ಯಂತ ಉಪಯುಕ್ತ ಹಣ್ಣಾಗಿದೆ.
1. ಮಿಥ್ಯ- ಮಧುಮೇಹ ಇದ್ದರೆ ಸೀತಾಫಲ ಸೇವಿಸುವಂತಿಲ್ಲ ಸತ್ಯ- ಸೀತಾಫಲ ಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಅಂಶವಿದೆ. ಇದು ಎಲ್ಲಾ ಕಾಲಮಾನದಲ್ಲೂ ಬಿಡದ, ಕಾಲೋಚಿತ ಹಣ್ಣಾಗಿದ್ದು ಇದನ್ನು ಮಧುಮೇಹಿ ರೋಗಿಗಳಿಗೆ ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಅಲ್ಲದೆ, ಸೀತಾಫಲದಲ್ಲಿ ಯಥೇಚ್ಛವಾಗಿರುವ ಡಯಟೆರಿ ಫೈಬರ್‌ಗಳು ದೇಹವು ಸಕ್ಕರೆಯನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಟೈಪ್-2 ಮಧುಮೇಹ ಬರದಂತೆ ತಡೆಯಬಹುದು.2. ಭಯ- ಕೊಬ್ಬು ಇರುವವರು ಸೀತಾಫಲ ತಪ್ಪಿಸಿ ಸತ್ಯ- ಅಧಿಕ ತೂಕ ಹೊಂದಿರುವ ಜನರು ಸೀತಾಫಲವನ್ನು ಸೇವಿಸಬಾರದು, ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಇದು ನಿಜವಲ್ಲ. ವಾಸ್ತವವೆಂದರೆ ಇವು ವಿಟಮಿನ್ ಬಿ ನ ಉತ್ತಮ ಮೂಲವಾಗಿದೆ, ಅದರಲ್ಲೂ ವಿಶೇಷವಾಗಿ ವಿಟಮಿನ್ ಬಿ 6 ಅಂಶ ಇದರಲ್ಲಿದೆ. ಆದ್ದರಿಂದ, ಇದು ಉಬ್ಬುವುದನ್ನು ತಡೆಯುತ್ತದೆ. ಸೀತಾಫಲದಲ್ಲಿ ನಿಯಾಸಿನ್ ಮತ್ತು ಡಯಟೆರಿ ಫೈಬರ್ ಅಧಿಕ ಪ್ರಮಾಣದಲ್ಲಿರುತ್ತವೆ. ಇದರ ಪ್ರಭಾವದಿಂದಾಗಿ ಇದನ್ನು ಸೇವಿಸಿದಾಗ ಕೊಲೆಸ್ಟ್ರಾಲ್ ಮಟ್ಟಗಳು ಕಡಿಮೆಯಾಗುತ್ತವೆ.
3. ಮಿಥ್ಯ - ಹೃದ್ರೋಗಿಗಳು ಸೀತಾಫಲದಿಂದ ದೂರವಿರಬೇಕು ಸತ್ಯ- ನಿಜ ಹೇಳಬೇಕಾದರೆ ಸೀತಾಫಲ ಹೃದಯಕ್ಕೆ ಒಳ್ಳೆಯದು. ಅವುಗಳು ಮ್ಯಾಂಗನೀಸ್ ಮತ್ತು ವಿಟಮಿನ್ ಸಿ ಯಂತಹ ಖನಿಜಾಂಶಗಳು ಅಧಿಕವಾಗಿರುತ್ತವೆ. ಅವು ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಅದು ಹೆಚ್ಚು ಕ್ರಿಯಾತ್ಮಕವಾಗಲು, ಅದರ ಕಾರ್ಯನಿರ್ವಹಣೆ ಹೆಚ್ಚಲು ಈ ಹಣ್ಣು ಸಹಕಾರಿಯಾಗಿದೆ. ತ್ವಚೆಯ ಬೇಗ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಆರೋಗ್ಯಕರ ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಗಾಗಿ ಈ ಹಣ್ಣು ನಿಮ್ಮ ಆಹಾರದ ಭಾಗವಾಗಿರಲಿ.
4. ಭಯ - ಪಿಸಿಓಡಿ ಇದ್ದರೆ ತಪ್ಪಿಸಿ ಸತ್ಯ - ಬಹಳ ಹಿಂದಿನಿಂದಲೂ ಬಂದ ಜನಪ್ರಿಯ ನಂಬಿಕೆ ಎಂದರೆ PCOD ಇರುವ ಮಹಿಳೆಯರು ಈ ಹಣ್ಣನ್ನು ತಪ್ಪಿಸಬೇಕು. ಆದರೆ ಇದರ ಅಗತ್ಯವೇ ಇಲ್ಲ. ಸೀತಾಫಲವು ಕಬ್ಬಿಣಾಂಶಕ್ಕೆ ಉತ್ತಮ ಮೂಲವಾಗಿದೆ ಮತ್ತು ಆಯಾಸ, ಕಿರಿಕಿರಿ ತಗ್ಗಿಸುತ್ತದೆ ಮತ್ತು ಫಲವತ್ತತೆಯನ್ನು ಸುಧಾರಿಸುತ್ತದೆ, ಬಹುಮುಖ್ಯವಾಗಿ ಸೀತಾಫಲವು ಗರ್ಭಪಾತದ ಅಪಾಯವನ್ನು ತಡೆಯುವ ಸಾಮರ್ಥ್ಯವನ್ನು ಸಹ ಹೊಂದಿದೆ ಎಂಬುದು ನೆನಪಿರಲಿ. ಸೀತಾಫಲವು ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗಲು, ನರ ವ್ಯೂಹ ಮತ್ತು ರೋಗ ನಿರೋಧಕ ಶಕ್ತಿಯು ಸುಗಮವಾಗಲು ನೆರವಾಗುತ್ತದೆ.