ಸಮರಸ ಚಿತ್ರ ಸುದ್ದಿ: ಕಾಸರಗೋಡು: 'ಸ್ಪಿಕ್ ಮೆಕೆ'ಚಿನ್ಮಯ ಚಾಪ್ಟರ್ ವತಿಯಿಂದ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಪ್ರಸಿದ್ಧ ಸಂಗೀತ ವಿದುಷಿ ಬಾಂಬೆ ಜಯಶ್ರೀ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಆನ್‍ಲೈನ್ ಮೂಲಕ ನೆರವೇರಿತು. ಚಿನ್ಮಯ ವಿದ್ಯಾಲಯ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳಾದ ಕುಮಾರಿ ಲಕ್ಷ್ಮೀ ಪಾರ್ವತಿ, ಜಿತಿನ್ ಸತ್ಯೇಂದ್ರನ್, ಟಿ,ವಿ ಧನುಷ್ ಉಪಸ್ಥಿತರಿದ್ದರು.