ಕಾಸರಗೋಡು: ನಗರದ ಎಸ್.ವಿ.ಟಿ. ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳರ ಷಷ್ಠ್ಯಬ್ಧ ಸಂಭ್ರಮ 2021 ಜ್ಞಾನವಾಹಿನಿ 60 ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ವಲಯ ಸಮಿತಿಯ ಸಮಾರೋಪ ಸಮಾರಂಭ ಮತ್ತು ಪಂಚಮ ಕಾಸರಗೋಡು ಯಕ್ಷೋಕ್ಸವ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ವ್ಯಾಸ ಮಂಟಪದಲ್ಲಿ ಸೋಮವಾರ ನಡೆಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಪಂಚಮ ಯಕ್ಷೋತ್ಸವ ಉದ್ಘಾಟಿಸಿ ಆಶೀರ್ವದಿಸಿದರು. ಇದೇ ಸಂದಭರ್Àದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರನ್ನು ಷಷ್ಠ್ಯಬ್ಧ ಅಂಗವಾಗಿ ಅಭಿನಂದಿಸಲಾಯಿತು.
ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಷಷ್ಠ್ಯಬ್ಧ ವಲಯ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ವಿಶೇಷ ಅಭ್ಯಾಗತರಾಗಿ ಉಪಸ್ಥಿತರಿದ್ದರು. ಷಷ್ಠ್ಯಬ್ಧ ಕಾಸರಗೋಡು ವಲಯ ಸಮಿತಿ ಕೋಶಾಧಿಕಾರಿ ರಾಂ ಪ್ರಸಾದ್ ಸಭಾಧ್ಯಕ್ಷತೆ ವಹಿಸಿದರು. ಷಷ್ಠ್ಯಬ್ಧ ಕಾಸರಗೋಡು ವಲಯ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ, ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ.ಟಿ.ಸುಬ್ರಹ್ಮಣ್ಯನ್ ಉಪಸ್ಥಿತರಿದ್ದರು. ಹಿರಿಯ ಯಕ್ಷಗಾನ ಕಲಾವಿದ ಅರ್ಥಧಾರಿ ಸುಂದರಕೃಷ್ಣ ಮಧೂರು ಹಾಗು ನಾಟ್ಯ ಗುರು ರಾಕೇಶ್ ರೈ ಅಡ್ಕ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಷಷ್ಠ್ಯಬ್ಧ ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಕಾರ್ಯಕ್ರಮವನ್ನು ಸಂಯೋಜಿಸಿದರು. ಜಗದೀಶ್ ಕೂಡ್ಲು ಕೆ, ಶ್ರೀಲತಾ ಟೀಚರ್ ಗುರು ನಮನ ಮತ್ತು ಅಭಿನಂದನಾ ಪತ್ರವನ್ನು ವಾಚಿಸಿದರು.
ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ತಂತ್ರಿವರ್ಯ, ಆನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಸ್ವಾಗತಿಸಿ, ಷಷ್ಠ್ಯಬ್ಧ ಸಮಿತಿಯ ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಕೋಟೆಕಣಿ ವಂದಿಸಿದರು. ಪತ್ರಕರ್ತ ವಿ.ಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.