ಕಾಸರಗೋಡು: ಮಾದಕ ಪದಾರ್ಥ ಸೇವನೆ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಸುವ ಜನಜಾಗೃತಿ ಕಾರ್ಯಕ್ರಮಗಳಿಗೆ ನೇತೃತ್ವ ನೀಡುವ ಮತ್ತು ಸಿಬ್ಬಂದಿಗೆ ತರಬೇತಿ ನಿಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ರಚಿಸಲಾಗುವ ಸಂಪನ್ಮೂಲ ತಂಡದಲ್ಲಿ ಸದಸ್ಯರಾಗಲು ಆಸಕ್ತರಿಂದ ಅರ್ಜಿ ಕೋರಲಾಗಿದೆ. ಮಾದಕ ಪದಾರ್ಥ ವಿರುದ್ಧ ವಲಯದಲ್ಲಿ/ ಐ.ಆರ್.ಸಿ.ಎ. ಗಳಲ್ಲಿ ಚಟುವಟಿಕೆ ನಡೆಸಿ ಅನುಭವಹೊಮದಿರುವ, ಸಾಮಾಜಿಕ ಕಾರ್ಯಗಳಲ್ಲಿ, ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ , ತರಬೇತಿ ವಲಯಗಳಲ್ಲಿ ಅನುಭವ ಹೊಂದಿರುವ ಇತ್ಯಾದಿ ಮಂದಿ ಅರ್ಜಿ ಸಲ್ಲಿಸಬಹುದು. ಅರ್ಜಿದಾತರು ಕಾಸರಗೋಡು ಜಿಲ್ಲೆಯ ಶಾಶ್ವತ ನಿವಾಸಿಗಳಾಗಿರಬೇಕು. ಸರಕಾರಿ, ಅರೆ ಸರಕಾರಿ ಸಂಸ್ಥೆಗಳಲ್ಲಿ ಸೇವಾನಿತರು ಅರ್ಜಿ ಸಲ್ಲಿಸಕೂಡದು. ಆಯ್ಕೆಗೊಂಡವರನ್ನು ಸಮಾಜನೀತಿ ಇಲಾಖೆ ನಡೆಸುವ ಉನ್ನತ ತರಬೇತಿಗಾಗಿ 3 ದಿನಗಳ ಅವಧಿಗೆ ಭಾಗವಹಿಸಲು, 2023 ವರೆಗೆ ಜಿಲ್ಲಾ ಸಮಾಜನೀತಿ ಅಧಿಕಾರಿ ತಿಳಿಸುವ ಅವಧಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು. ತರಬೇತು ನೀಡುವ ವೇಳೆ ತಾಸಿಗೆ 500 ರೂ.ನಂತೆ ಪ್ರತಿಫಲ ನೀಡಲಾಗುವುದು. ಆಸಕ್ತರು ಅ.15ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಜಿಲ್ಲಾ ಸಮಾಜನೀತಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994255074.