ಅಂಗಮಾಲಿ: ಪ್ರಮುಖ ಅರೆ ಸರ್ಕಾರಿ ತೆಂಗಿನ ಎಣ್ಣೆ ಕಲಬೆರಕೆಯೊಂದಿಗೆ ಬಳಕೆಗೆ ಯೋಗ್ಯವಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬಂದಿದೆ. ಪ್ರಸ್ತುತ ಈ ಬಗೆಗಿನ ದೂರುಗಳು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಸಪ್ಲೈಕೋ ತನ್ನದೇ ಉತ್ಪನ್ನಗಳೊಂದಿಗೆ ವಿತರಿಸುವ ತೆಂಗಿನೆಣ್ಣೆ ಎಂಬುದು ವಿಶೇಷ.
ಆಹಾರ ಸುರಕ್ಷಾ ಇಲಾಖೆ ನೇತೃತ್ವದಲ್ಲಿ ಗುರುವಾರ ಮತ್ತು ಶುಕ್ರವಾರ ತೊಡುಪುಳ,ಅಡಿಮಾಲಿ, ಕಟ್ಟಪ್ಪನ, ನೆಟುಂಗಂಡಂ, ಪೀರ್ಮೆಡ್, ಕುಮಳಿ, ಇಡುಕ್ಕಿ ಮೊದಲಾದ ಪ್ರಧಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಪ್ಲೈ ಕೋ ಸೂಪರ್‍ಮಾರ್ಕೆಟ್ ಗಳು, ಮಾವೇಲಿ ಸ್ಟೋರ್ ಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ತೆಂಗಿನೆಣ್ಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ದೂರುಗಳು ದಾಖಲಾಗಿರುವ ಸನ್ನಿವೇಶಗಳಿಂದ ಪರಿಶೀಲನೆಗೆ ಮುಂದಾಗಲಾಗಿದೆ. ಆಹಾರ ಸುರಕ್ಷತಾ ಇಲಾಖೆಯಿಂದ ತಪಾಸಣೆ ನಡೆಸಲಾಯಿತು. ಸಂಗ್ರಹಿಸಿದ ಮಾದರಿಗಳನ್ನು ತಜ್ಞರ ಪರೀಕ್ಷೆಗಾಗಿ ಕಕ್ಕನಾಡು ಪರಿಶೀಲನಾ ಘಟಕಕ್ಕೆ ಕಳುಹಿಸಲಾಗುತ್ತದೆ. ವಿಶ್ಲೇಷಣಾತ್ಮಕ ಪರಿಶೋಧನೆ ನಡೆಯಲಿದೆ.
ಪರೀಕ್ಷೆಯ ಫಲಿತಾಂಶಗಳ ನಂತರ ಮುಂದಿನ ಕ್ರಮ ಕೈಗೊಳ್ಲಲಾಗುವುದು. ತೊಡುಪುಳ ಆಹಾರ ಸುರಕ್ಷತಾ ಅಧಿಕಾರಿ ಎಂ.ಎನ್. ಶಂಸಿಯಾ, ದೇವಿಕುಳಂ ಆಹಾರ ಭದ್ರತಾ ಅಧಿಕಾರಿ ಜು ಜೋಸೆಫ್, ಉಡುಂಬಂಚೋಳ ಆಹಾರ ಭದ್ರತೆ ಅಧಿಕಾರಿ ಅಲ್ಮೇರಿ ನೇತೃತ್ವ ವಹಿಸಿದ್ದರು.