ತ್ರಿಶೂರ್: ಗುರುವಾಯೂರು ದೇವಸ್ಥಾನದ ಪ್ರಧಾನ ತಂತ್ರಿ ಪೂಳಕ್ಕರ ಚೆನ್ನಾಸ್ ನಾರಾಯಣನ್ ನಂಬೂದಿರಿಪ್ಪಾಡ್ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ನಿಧನರಾದರು.
ಅವರು ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾಗೆ ದೀರ್ಘಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಮತ್ತು ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾದ ಕಾರಣ ಅವರನ್ನು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.
2013ರಲ್ಲಿ ಚೆನ್ನಾಸ್ ವಾಸುದೇವನ್ ನಂಬೂದಿರಿಪಾಡ್ ಅವರ ನಿಧನದ ನಂತರ ಹಿರಿಯ ಸದಸ್ಯ ನಾರಾಯಣನ್ ನಂಬೂದಿರಿಪಾಡ್ ಅವರು ತಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.