ಲಖನೌ: ಸಮಾಜವಾದಿ ಪಕ್ಷ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ(ಎಸ್‌ಬಿಎಸ್‌ಪಿ) 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಬುಧವಾರ ಪ್ರಕಟಿಸಿದೆ ಮತ್ತು ರಾಜ್ಯದಿಂದ ಬಿಜೆಪಿಯನ್ನು "ಓಡಿಸಲು" 'ಖಡೇದ ಹೋವೇ' ಎಂಬ ಘೋಷಣೆ ನೀಡಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಸೋಲಿಸಿ ಸತತ ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 'ಖೇಲಾ ಹೋಬೆ' (ಗೇಮ್ ಆನ್) ಘೋಷಣೆ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲೂ ಬಿಜೆಪಿಯನ್ನು "ಓಡಿಸಲು" ಸಮಾಜವಾದಿ ಪಕ್ಷ-ಎಸ್‌ಬಿಎಸ್‌ಪಿ ಮೈತ್ರಿ 'ಖಡೇದ ಹೌವೇ' ಎಂಬ ಘೋಷಣೆ ಮಾಡಿದೆ.
"ಪಶ್ಚಿಮ ಬಂಗಾಳದಲ್ಲಿ 'ಖೇಲಾ ಹೋಬೆ' ಎಂಬ ಘೋಷಣೆ ಮೂಲಕ 'ದೀದಿ' ಬಿಜೆಪಿಯನ್ನು ರಾಜ್ಯದಿಂದ ಹೊರಹಾಕಿದರು. ಅದೇ ರೀತಿ ಉತ್ತರ ಪ್ರದೇಶದಲ್ಲೂ 'ಖಡೇದ ಹೋವೇ' ಎಂಬ ಘೋಷಣೆ ಮೂಲಕ ಬಿಜೆಪಿ ಸರ್ಕಾರವನ್ನು ಜನರ ಕಿತ್ತುಹಾಕಲಿದ್ದಾರೆ ಎಂದು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ(ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರು ಹೇಳಿದ್ದಾರೆ.
'ವಂಚಿತ್, ಪಿಚ್ಡಾ, ದಲಿತ ಮತ್ತು ಅಲ್ಪಸಂಖ್ಯಾತ ಭಾಗಿದಾರಿ ಮಹಾಪಂಚಾಯತ್' ನಲ್ಲಿ ಸಮಾಜವಾದಿ ಪಕ್ಷದ(ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ವಿಧಾನಸಭೆ ಚುನಾವಣೆಗೆ ಎರಡು ಪಕ್ಷಗಳ ನಡುವಿನ ಮೈತ್ರಿಯನ್ನು ಘೋಷಿಸಿದರು.