ಮುಳ್ಳೇರಿಯ: ಕಣ್ಣೂರು ಡೆಪ್ಯೂಟಿ ತಹಶಿಲ್ದಾರರಾಗಿ ಬಡ್ತಿ ಪಡೆದ ಚಂದ್ರಶೇಖರರವರಿಗೆ ಮುಳ್ಳೇರಿಯ ಫ್ರೆಂಡ್ಸ್ ವತಿಯಿಂದ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯಾ ಘಟಕದ ಉಪಾಧ್ಯಕ್ಷ ಎಂ.ಎಸ್ ಹರಿಪ್ರಸಾದ್ ಮುಳ್ಳೇರಿಯ ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರ ಸೇವೆಯೇ ಜರ್ನಾಧನ ಸೇವೆಯೆಂದು ನಿಸ್ವಾರ್ಥ ಸೇವೆಗೈದ ಇವರನ್ನು ಈ ಭಡ್ತಿ ಅರಸಿಕೊಂಡು ಬಂದಿದೆ. ಇನ್ನೂ ಹೆಚ್ಚಿನ ಭಡ್ತಿ ಲಭಿಸುವಂತಾಗಲಿ ಎಂದು ಶುಭ ಹಾರೈಸಿದರು.
ಕನ್ನಡ ಚಲನಚಿತ್ರ ನಟ, ಸವಾಕ್ ಕಾರಡ್ಕ ಬ್ಲಾಕ್ ಸಮಿತಿಯ ಅಧ್ಯಕ್ಷ ಸುಂದರ್ ಮವ್ವಾರು ಮಾತನಾಡಿ, ಸರ್ಕಾರಿ ಕೆಲಸ ಕಾರ್ಯಗಳ ಸಂಶಯ ನಿವಾರಣೆಗಾಗಿ ಗ್ರಾಮೀಣ ಜನರಿಗೆ ತಮ್ಮ ರಜಾದಿನಗಳನ್ನು ಮೀಸಲಿಟ್ಟ ನಮ್ಮೂರಿನ ಓರ್ವ ಶ್ರೇಷ್ಠ ಜನಪರ ಅಧಿಕಾರಿಯವರು ಕಣ್ಣೂರು ತಮ್ಮ ಕಾರ್ಯ ನಿಮಿತ್ತ ತೆರಳುತ್ತಿರುವುದು ನಿಜಕ್ಕೂ ಬೇಸರದ ವಿಷಯವಾದರೂ ಭಡ್ತಿ ಪಡೆದು ತೆರಳುತ್ತಿರುವುದು ಇಡೀ ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಉಪಜಿಲ್ಲಾಧಿಕಾರಿಯಾಗಿ ಕಾಸರಗೋಡು ಜಿಲ್ಲೆಗೆ ನೇಮಕವಾಗುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುರೇಶ್ ಡಿ ರಾವ್ ಮೇಗಿನಮನೆ ಮಾತನಾಡಿ ನಮ್ಮೂರಿನ ಓರ್ವ ಹೆಮ್ಮೆಯ ಅಧಿಕಾರಿಯ ಭವಿಷ್ಯ ಉಜ್ವಲವಾಗಲಿ ಎಂದರು.ಚಿತ್ರಾಂಜಲಿ ಸ್ಟೂಡಿಯೊ ದ ಅಜಿತ್ ಉಪಸ್ಥಿತರಿದ್ದರು.