ಕಾಸರಗೋಡು: ರಾಜ್ಯ ಸರಕಾರದ ತೀರ್ಮಾನ ಪ್ರಕಾರದ ಹೆಚ್ಚುವರಿ ಸಡಿಲಿಕೆಗಳು ಇಂತಿವೆ.
ಕಾಲೇಜು ಸಹಿತ ಇತರ ತರಬೇತಿ ಕೇಂದ್ರಗಳಲ್ಲಿ ಅ.18ರಿಂದ ಎಲ್ಲ ಬ್ಯಾಚ್ ಗಳ, 2 ಡೋಸ್ ವಾಕ್ಸಿನೇಷನ್ ಪಡೆದ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಬಹುದಾಗಿದೆ. ಈ ಸಂಸ್ಥೆಗಳ ಶಿಕ್ಷಕರು/ ತರಬೇತಿದಾರರು, ಇತರ ಸಿಬ್ಬಂದಿ ಎರಡು ಡೋಸ್ ಲಸಿಕೆ ಪಡೆದಿರಬೇಕು.
ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಏರ್ಪಡಿಸಲಾಗುವ ಕೋವಿಡ್-19 ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯ ಆದೇಶವನ್ನು ತೆರವುಗೊಳಿಸಲಾಗಿದೆ. ಇನ್ನುಮುಂದೆ ಎರಡು ಡೋಸ್ ವಾಕ್ಸಿನೇಷನ್ ಪಡೆದ ದಾಖಲೆ ಪತ್ರ ಹಾಜರುಪಡಿಸಿದರೆ ಸಾಕು.
ಚಿತ್ರ ಮಂದಿರ, ಸಭಾಂಗಣ ಸಹಿತ ಕಡೆಗಳಲ್ಲಿ ಶೇ 50 ಮಂದಿಗೆ ಕುಳಿತುಕೊಳ್ಳಲು ಅವಕಾಶಗಳಿದ್ದು, ಅ.25ರಿಂದ ಚಟುವಟಿಕೆಗಳಿಗೆ ಅನುಮತಿಯಿದೆ. ಎರಡು ಡೋಸ್ ಲಸಿಕೆ ಸ್ವೀಕರಿಸಿದವರಿಗೆ ಮಾತ್ರ ಪ್ರವೇಶಾತಿ ಇರುವುದು. ಈ ಸಂಸ್ಥೆಗಳ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಸ್ವೀಕರಿಸಿರಬೇಕು.
ಒಂದರಿಂದ 7 ನೇ ತರಗತಿ ವರೆಗೆ, 10 ರಿಂದ 12ನೇ ತರಗತಿ ವರೆಗಿನ ತರಗತಿಗಳು ಆರಂಭಿಸಲು ಅನುಮತಿ ಲಭಿಸಿದೆ. ಶಿಕ್ಷಣಾಲಯಗಳ ಶಿಕ್ಷಕರು, ಇತರ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಸ್ವೀಕರಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಸಂಬಂಧ ಪ್ರಕಟಿಸಿರುವ ಆದೇಶವನ್ನು ಎಲ್ಲ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು.
ಹೋಟೆಲ್ ಗಳು, ಮಾದರಿ ವಸತಿ ಶಾಲೆಗಳು ನ.1ರಿಂದ "ಬಯೋ ಬಬಲ್" ಮಾದರಿಯಲ್ಲಿ ತೆರೆದು ಕಾರ್ಯಾಚರಿಸಬಹುದು. ಎರಡು ಡೋಸ್ ವಾಕ್ಸಿನೇಷನ್ ಸ್ವೀಕರಿಸಿದ ಸಿಬ್ಬಂದಿ ಮಾತ್ರ ಇಲ್ಲಿ ಚಟುವಟಿಕೆ ನಡೆಸಬೇಕು. ರಾಜ್ಯ ಇತರ ಶಾಲೆಗಳು ಆರಂಭಗೊಳ್ಳುವ ನಿಟ್ಟಿನಲ್ಲಿ ಪ್ರಕಟಿಸಲಾದ ಆದೇಶವನ್ನು ಕಡ್ಡಾಯವಾಗಿ ಎಲ್ಲ ಸಂಸ್ಥೆಗಳೂ ಪಾಲಿಸಬೇಕು.
ವಿವಾಹ, ಮರಣಾನಂತರ ಸಮಾರಂಭಗಳು ಇತ್ಯಾದಿಗಳಲ್ಲಿ ಗರಿಷ್ಠ 50 ಮಂದಿ ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.