ವಯನಾಡ್: ವಯನಾಡಿನಲ್ಲಿ ಕಮ್ಯುನಿಸ್ಟ್ ಭಯೋತ್ಪಾದಕನೋರ್ವ ಶರಣಾಗಿದ್ದಾನೆ. ಏಳು ವರ್ಷಗಳಿಂದ ಮಾವೋವಾದಿಗಳ ಜೊತೆಗಿದ್ದ ರಾಮು ಅಲಿಯಾಸ್ ಲಿಜೇಶ್ ಶರಣಾಗಿದ್ದಾನೆ. ಕೇರಳ ಸರ್ಕಾರದ ಶರಣಾಗತಿ ನೀತಿಯಂತೆ ಲಿಜೇಶ್ ಶರಣಾಗಿದ್ದಾನೆ ಎಂದು ಐಜಿ ತಿಳಿಸಿದ್ದಾರೆ.ಐ.ಜಿ ಅಶೋಕ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದರು.
ಲಿಜೇಶ್ ಕಬನಿ ದಳದ ಡೆಪ್ಯುಟಿ ಕಮಾಂಡೆಂಟ್ ಆಗಿದ್ದರು. ವಯನಾಡ್ ಮೂಲದ ಲಿಜೇಶ್ ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಪುನರ್ವಸತಿ ಯೋಜನೆಯಡಿ ಕೇರಳದಲ್ಲಿ ನಡೆದ ಮೊದಲ ಶರಣಾಗತಿಯೂ ಇದಾಗಿದೆ.