HEALTH TIPS

ಆನ್ ಲೈನ್ ಭಾಷಣ ಸ್ಪರ್ಧೆ: ಸ್ಪರ್ಧಾ ವೀಡಿಯೋ ವಾಟ್ಸ್ ಆಪ್ ಮಾಡಲು ಸೂಚನೆ

             ಕಾಸರಗೋಡು: ಗಾಂಧಿ ಜಯಂತಿ ಸಪ್ತಾಹ ಅಂಗವಾಗಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾಸರಗೋಡು ಜಿಲ್ಲಾ ವಾರ್ತಾ ಕಚೇರಿ ಜಿಲ್ಲೆಯ ಹೈಯರ್ ಸೆಕೆಂಡರಿ, ಕಾಲೇಜು ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಭಾಷಣ ಸ್ಪರ್ಧೆ ನಡೆಸಲಿದೆ. ಅ.5ರ ಸಂಜೆ 5 ಗಂಟೆಗೆ ಮುಂಚಿತವಾಗಿ ಎಂಟ್ರಿಗಳನ್ನು ಸಲ್ಲಿಸಬಹುದು. "ಮಹಾತ್ಮಾಜಿ ಮತ್ತು ಧಾರ್ಮಿಕ ನೋಟ" ಎಂಬ ವಿಷಯದಲ್ಲಿ 5 ನಿಮಿಷಕ್ಕಿಂತ ಕಡಿಮೆ ಇರದ  ಭಾಷಣದ ವೀಡಿಯೋವನ್ನು 8547860180 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಬೇಕು. ಭಾಷಣಗಳನ್ನು ಈಗಾಗಲೇ ಇ-ಮೇಲ್ ಮಾಡಿರುವ ಮಂದಿಯೂ ಈ ನಂಬ್ರಕ್ಕೆ ಕಳುಹಿಸಬೇಕು. ವಿಜೇತರಿಗೆ ಸ್ಮರಣಿಕೆ ಮತ್ತು ಅರ್ಹತಾಪತ್ರ ನೀಡಲಾಗುವುದು. ಎಂಟ್ರಿಯ ಜೊತೆಗೆ ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆ, ವಿಳಾಸ, ಮೊಬೈಲ್ ನಂಬ್ರ ಇತ್ಯಾದಿ ಕಡ್ಡಾಯವಾಗಿ ಕಳುಹಿಸಬೇಕು. ಈ ಮಾಹಿತಿಗಳು ಇಲ್ಲದೇ ಇರುವ ಎಂಟ್ರಿಗಳನ್ನು ಪರಿಶೀಲಿಸುವುದಿಲ್ಲ. ದೂರವಾಣಿ ಸಂಖ್ಯೆ: 04994-255145. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries