ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ವತಿಯಿಂದ "ಆಸಾದಿ ಕಾ ಅಮೃತ ಮಹೋತ್ಸವ "ಅಂಗವಾಗಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಎಣ್ಮಕಜೆ ಗ್ರಾ. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಕಾರ್ಯಕ್ರಮ ಉದ್ಘಾಟಿಸಿದರು. ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಸೌಧಾಭಿ ಹನೀಫ್ ನಡುಬೈಲ್, ಪಂ.ಸದಸ್ಯರಾದ ರಾಮಚಂದ್ರ ಎಂ, ರಮ್ಲ, ಕುಸುಮಾವತಿ, ಪಂ.ಕಾರ್ಯದರ್ಶಿ ಅಚ್ಚುತ್ತ ಮಣಿಯಾಣಿ ಸಭೆಯಲ್ಲಿ ಉಪಸ್ಥಿತರಿದ್ದರು. ವಿಇಒ ಸಿನನ್ ಸ್ವಾಗತಿಸಿ ಜಲಜಾಕ್ಷಿ ವಂದಿಸಿದರು. ನವಾಸ್ ನಿರೂಪಿಸಿದರು.