ಕಾಸರಗೋಡು: ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಪೇಸ್ ಬುಕ್ ಮೂಲಕ ಹಂಚಿಕೊಂಡ ವಿವಾಹ ಕಾರ್ಯಕ್ರಮದ ಚಿತ್ರ ಭಾರೀ ಚರ್ಚೆಗೊಳಗಾಗಿದೆ. ಚಿತ್ರದಲ್ಲಿ ವಧುಗಳ ಅನುಪಸ್ಥಿತಿಯ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗಿದೆ.
ಟೀಕೆಗಳು ಮತ್ತು ಟ್ರೋಲ್‍ಗಳು ಬಂದ ನಂತರ ಪೋಸ್ಟ್ ನ್ನು ಹಲವಾರು ಬಾರಿ ಬದಲಾಯಿಸಲಾಯಿತು. ಆದರೆ ಆ ಬಳಿಕ ಪ್ರತ್ಯುತ್ತರವನ್ನು ಖಾರವಾಗಿಯೇ ನೀಡಿರುವ ಉಣ್ಣಿತ್ತಾನ್ ಅವರು ಮುಸ್ಲಿಂ ವಿವಾಹದ ಅರಿವಿನೊಂದಿಗೇ ಈ ಚಿತ್ರವನ್ನು ಹಂಚಿರುವೆ. ಗೊಂದಲಕ್ಕೀಡುಮಾಡಲು ಚಿತ್ರದಲ್ಲಿ ಏನೂ ಇಲ್ಲ. ಮತ್ತು ಲೈಂಗಿಕ ಅಸಮರ್ಥತೆಯಿಂದ ಬಳಲುತ್ತಿರುವ ಮನೋರೋಗಿಗಳು ಟೀಕೆಯ ಹಿಂದೆ ಇದ್ದಾರೆ ಎಂದು ಪ್ರತಿಕ್ರಿಯಿಸಿ ಬರೆದಿರುವರು.
ಕಾಸರಗೋಡು ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ. ಮುಸ್ಲಿಂ ಮದುವೆಗೆ, ನಿಕಾಹ್ ಮತ್ತು ಮದುವೆ ಪ್ರತ್ಯೇಕವಾಗಿ ನಡೆಯುತ್ತದೆ. ತಾನು ವಿವಾಹ ನಡೆದಲ್ಲಿಗೆ ತೆರಳಿದಾಗ ವಧುಗಳು ತಮ್ಮ ಉಡುಗೆ ಬದಲಿಸಲು ಹೋಗಿದ್ದರು. ಎರಡು ಗಂಟೆಗೆ ಸಭಾಂಗಣದಿಂದ ಹೊರಡಬೇಕಿತ್ತು. ಹೆಚ್ಚುಹೊತ್ತು ಕಾಯುವ ಸ್ಥಿತಿಯಲ್ಲಿಲ್ಲದ್ದರಿಂದ ವರರ ಜೊತೆಗೆ ನಿಂತು ಪೋಟೋ ತೆಗೆಸಬೇಕಾಯಿತು ಎಂದು ರಾಜಮೋಹನ್ ಉಣ್ಣಿತ್ತಾನ್ ಹೇಳಿರುವರು.
ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮುಸ್ಲಿಂ ವಿವಾಹ ಸಮಾರಂಭಗಳ ತಿಳುವಳಿಕೆಯುಳ್ಳ ಯಾರಿಗಾದರೂ ಇರಬಹುದಾದ ಸಂದೇಹಗಳನ್ನು ಆಧರಿಸಿ ಚಿತ್ರಕ್ಕೆ ಕಾಮೆಂಟ್ ಮಾಡಲಾಗಿದೆ. ಪೋಸ್ಟ್‍ನೊಂದಿಗೆ ಬರುವ ಟಿಪ್ಪಣಿಯ ಬದಲಾವಣೆಯು ವರನನ್ನು ವ್ಯಾಪಕವಾಗಿ ಅಪಹಾಸ್ಯ ಮಾಡಿದ ಬಳಿಕ ವ್ಯಕ್ತಗೊಂಡಿತು. ಅಂತಿಮವಾಗಿ ಪೋಸ್ಟ್ ನ್ನು ತೆಗೆದುಹಾಕಿ ವಧುಗಳ ಪೋಟೋ ಸೇರಿಸಿ ಮತ್ತೆ ಪೋಸ್ಟ್ ಮಾಡಲಾಯಿತು.
ಮಂಜೇಶ್ವರದ ಮುಸ್ಲಿಂ ಯೂತ್ ಲೀಗ್ ನಾಯಕರ ಪುತ್ರರಾದ ಸಿನಾನ್ ಮತ್ತು ಹಿರಿಯ ಸಹೋದರ ಶಫೀಕ್ ಅವರ ವಿವಾಹದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಈ ಗಟನೆಗಳಿಗೆ ಸಾಕ್ಷಿಯಾಗಬೇಕಾಯಿತು. ವರರ ಚಿತ್ರವನ್ನು ಮಾತ್ರ ಪೋಸ್ಟ್ ಮಾಡಿರುವುದು ಮುಖ್ಯ ಟೀಕೆಗೆ ಕಾರಣವಾಯಿತು.