ಬದಿಯಡ್ಕ: ಎ ವುಮೆನ್ಸ್ ಅಸೋಸಿಯೇಶನ್ ಕಾಸರಗೋಡು ಫೋರ್ ಎಂಪ್ಲೋಯ್‍ಮೆಂಟ್ (ಅವೇಕ್) ಸಂಘಟನೆಯ ಸದಸ್ಯರು ಗಾಂಧಿ ಜಯಂತಿ ಪ್ರಯುಕ್ತ ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಭೇಟಿಯಿತ್ತರು. ಆಶ್ರಮದ ನಿರ್ವಹಣೆಗಾಗಿ ರೂ.15000ವನ್ನು ದೇಣಿಗೆಯಾಗಿ ನೀಡಿದರು. ಚೆಂಗಳ ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಜುಲೇಕಾ ಮಾಹಿನ್, ಶರೀಫಾ ಟೀಚರ್, ಸಕೀನಾ ಅಕ್ಬರ್, ಕೆ.ಸಿ.ಮರಿಯಂಬಿ, ಶರಫುನ್ನಿಸ, ಜಮೀಲ, ಶಂಶದ್, ಯಮೀನ, ಶೀಮಿನು, ಜುಬಾರಿ, ಸಫಿಯಾ, ನಫೀಸಾ, ಶಾನಾಜ್ ನಿಸಾರ್, ಜೀನತ್ ಅವರು ಆಶ್ರಮದ ಕುರಿತು ಮಾಹಿತಿಯನ್ನು ಪಡೆದುಕೊಂಡು. ಆಶ್ರಮವಾಸಿಗಳೊಂದಿಗೆ ಮಧ್ಯಾಹ್ನದ ಭೋಜನ ಸವಿದರು. ಆಶ್ರಮದ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.