HEALTH TIPS

"ನಾವೆಲ್ಲಾ ಒಂದೇ ದೋಣಿಯಲ್ಲಿನ ಪ್ರಯಾಣಿಕರು, ದೋಣಿಯನ್ನು ಕಾಳಜಿ ಮಾಡೋಣ"

                   ನವದೆಹಲಿ: ಸರ್ದಾರ್ ವಲ್ಲಭಾ ಬಾಯಿ ಪಟೇಲ್ ಅವರ ಸೂರ್ತಿಯಿಂದ ಭಾರತ ಇಂದು ಆಂತರಿಕ ಹಾಗೂ ಬಾಹ್ಯ ಸವಾಲುಗಳು ಸೇರಿದಂತೆ ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವ ಸಾಮಥ್ರ್ಯ ಬೆಳೆಸಿಕೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

              ಭಾರತದ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಏಕತಾ ದಿವಸ್ ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ತಮ್ಮ ಸಂದೇಶ ರವಾನಿಸಿರುವ ಮೋದಿ, ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರು ಭಾರತ ಒಂದು ದೇಹದಂತಿರಬೇಕು ಎಂದು ಬಯಸಿದ್ದರು.

            ಅದಕ್ಕಾಗಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಇರಬೇಕೆಂದು ಬಯಸುತ್ತಿದ್ದರು. ಅವರ ಏಕ್ ಭಾರತ್ ಕಲ್ಪನೆಯ ಅರ್ಥವೆಂದರೆ ದೇಶದ ಪ್ರತಿಯೊಬ್ಬರು ಸಮಾನ ಅವಕಾಶಗಳನ್ನು ಪಡೆಯಬೇಕು. ಸಮಾನ ಕನಸು ಕಾಣುವ ಹಕ್ಕು ಹೊಂದಿರಬೇಕು ಎಂದು ಹೇಳಿದರು.

                 ದಶಕಗಳ ಹಿಂದೆ ಮಹಿಳೆಯರು, ಪುರುಷರು, ಪ್ರತಿಯೊಂದು ವರ್ಗದವರು, ಎಲ್ಲ ಸಮುದಾಯಗಳು ಸೇರಿ ಸಮಗ್ರ ಸಾಮಥ್ರ್ಯದೊಂದಿಗೆ ಏಕ ಭಾರತ ಅಭಿಯಾನ ಬಲಗೊಳಿಸಿದ್ದರು. ನಾವು ಈಗಲೂ ಅದೇ ಸ್ವರೂಪದ ಏಕ್ ಭಾರತ್ ಅಭಿಯಾನದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಭಾರತೀಯ ಮಹಿಳೆಯರು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದರು.

ದೇಶದ ಭದ್ರತಾ ಹಿತಾಸಕ್ತಿಗಾಗಿ ಆತ್ಮನಿರ್ಭರ್ ಭಾರತ ಎಂಬ ಹೊಸ ಪ್ರಯಾಣವನ್ನು ಆರಂಭಿಸಿದ್ದೇವೆ. ನಮ್ಮಲ್ಲಿ ಒಗ್ಗಟ್ಟಿದ್ದರೆ, ಸಾಮಾನ್ಯ ಪ್ರಯತ್ನಗಳ ಮೂಲಕವೇ ಭಾರತವನ್ನು ಅಗ್ರಮಾನ್ಯ ದೇಶವನ್ನಾಗಿಸಬಹುದು ಎಂದು ವಲ್ಲಭಬಾಯಿ ಪಟೇಲ್ ಹೇಳುತ್ತಿದ್ದರು.

                ದೇಶದ ನಿರ್ಗಮ ಪ್ರದೇಶಕ್ಕೂ ಸಂಪರ್ಕ ಕಲ್ಪಿಸಲಾಗುತ್ತಿದೆ, ಅಂತರ ಕಡಿಮೆಯಾಗುತ್ತಿದೆ. ಜನರ ಹೃದಯಗಳು ಬೆಸೆದುಕೊಳ್ಳುತ್ತಿವೆ, ಒಗ್ಗಟ್ಟು ಹೆಚ್ಚಾಗುತ್ತಿದೆ. ನೀರು, ಭೂಮಿ, ಆಕಾಶ ಸೇರಿ ಎಲ್ಲಾ ಮುಂಚೂಣಿಯಲ್ಲೂ ಭಾರತದ ಶಕ್ತಿ ಮತ್ತು ನಿರ್ಣಯವೂ ಅಭೂತಪೂರ್ವವಾಗಿದೆ ಎಂದಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ, ದೇಶದ ಈಶಾನ್ಯ ರಾಜ್ಯಗಳಲ್ಲಿ, ಹಿಮಾಲಯದ ತಪ್ಪಲುಗಳಲ್ಲಿನ ಪ್ರತಿಯೊಂದು ಹಳ್ಳಿಗಳಲ್ಲೂ ಅಭಿವೃದ್ಧಿಯಾಗುತ್ತಿದೆ. ಆಧುನಿಕ ಮೂಲಸೌಲಭ್ಯಗಳು ದೇಶದ ಭೌಗೋಳಿಕ ಹಾಗೂ ಐತಿಹಾಸಿಕ ಅಂತರವನ್ನು ಕಡಿಮೆ ಮಾಡುತ್ತಿವೆ.

                 ನಮ್ಮ ಗುರಿ ಏಕತೆ ಕಾಯ್ದುಕೊಳ್ಳುವುದಾಗಿದೆ. ಭಾರತ ಸದಾ ಕಾಲ ಶಕ್ತಿಯುತವಾಗಿ, ಸಮಗ್ರವಾಗಿ, ಸೂಕ್ಷ್ಮ ವಾಗಿ, ಜಾಗೃತವಾಗಿ, ವಿಧೇಯವಾಗಿ, ಅಭಿವೃದ್ಧಿ ಹೊಂದಬೇಕು. ಭಾರತದ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂಬುದು ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಅಭಿಪ್ರಾಯವಾಗಿತ್ತು. ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.

              ಭಾರತೀಯ ಸಮಾಜ ಮತ್ತು ಸಂಪ್ರದಾಯದ ಅಭಿವೃದ್ಧಿಗೆ ಪ್ರಜಾಪ್ರಭುತ್ವ ಬಲವಾದ ತಳಪಾಯ ನೀಡಿದೆ. ಇದು ಒಂದೇ ಭಾರತ ಎಂಬ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ನಾವೆಲ್ಲಾ ಪ್ರಯಾಣಿಕರು ಒಂದೇ ದೋಣಿಯಲ್ಲಿ ಕುಳಿತಿದ್ದೇವೆ. ದೋಣಿಯನ್ನು ಕಾಳಜಿಯಿಂದ ನೋಡಿಕೊಳ್ಳಬೇಕಿದೆ.

           ಭೌಗೋಳಿಕ ಒಂದು ಘಟಕ ಮಾತ್ರವಲ್ಲ. ಶ್ರೇಷ್ಠ ಆದರ್ಶಗಳು, ನಾಗರೀಕತೆ, ಸಂಸ್ಕøತಿ ಸೇರಿದಂತೆ 135 ಕೋಟಿ ಮಂದಿಯ ಜೀವನ ಒಂದಾಗಬೇಕು. ನಮ್ಮ ಆತ್ಮ, ಕನಸು, ಸ್ಪೂರ್ತಿಗಳು ಸಮ್ಮಿಳತವಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries