ಕಾಸರಗೋಡು: ಜಿಲ್ಲಾ ಕ್ರೈಂ ಬ್ರಾಂಚ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ತೋಟತ್ತಿಲ್ ಅ. 12ರಂದು ಕಾಸರಗೋಡಿಗೆ ಭೇಟಿ ನೀಡಲಿದ್ದು, ಜಿಲ್ಲೆಯಲ್ಲಿ ಕ್ರೈಂ ಬ್ರಾಂಚ್ ನಡೆಸುತ್ತಿರುವ ತನಿಖೆಗಳ ಅವಲೋಕನ ನಡೆಸಲಿದ್ದಾರೆ.
ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ, ಮಂಜೇಶ್ವರ ಕುಂಡುಕೊಳಕೆಯಲ್ಲಿ ಆರಾಧನಾಲಯಕ್ಕೆ ಕಲ್ಲೆಸೆತ ಸೇರಿದಂತೆ ವಿವಿಧ ಪ್ರಕರಣಗಳ ತನಿಖೆ ಪ್ರಗತಿ ಬಗ್ಗೆ ಅವಲೋಕನ ನಡೆಸಲಿದ್ದಾರೆ. ಈ ಸಂದರ್ಭ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರದೀಪ್ ತೋಟತ್ತಿಲ್ ಚರ್ಚೆ ನಡೆಸಲಿದ್ದಾರೆ.