ತಿರುವನಂತಪುರ: ರಾಜ್ಯದ ಖಾಸಗೀ ಆಸ್ಪತ್ರೆಯಾದ ಕಿಮ್ಸ್ ಗೆ ಎನ್ ಫೆÇೀರ್ಸ್‍ಮೆಂಟ್ ದಾಳಿ ನಡೆಸಿದೆÉ. ಕೊಟ್ಟಾಯಂನಲ್ಲಿರುವ ಆಸ್ಪತ್ರೆಗೂ ದಾಳಿ ನಡೆಸಲಾಗಿದೆ. ಕೊಟ್ಟಾಯಂನ ಕಿಮ್ಸ್ ಆಸ್ಪತ್ರೆಯ ಮಾರಾಟಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗವು ಈ ಹಿಂದೆ ಪ್ರಕರಣವನ್ನು ದಾಖಲಿಸಿತ್ತು. ಪ್ರಸ್ತುತ ದಾಳಿಯು ತನಿಖೆಗೆ ಸಂಬಂಧಿಸಿದಂತೆ ಎಂದು ಅಪರಾಧ ವಿಭಾಗ ಹೇಳಿದೆ.
ಆಸ್ಪತ್ರೆ ಮಾಲೀಕರು ಮಾರಿಷಸ್‍ನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ದೂರು ಬಂದಿತ್ತು. ಇದರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಅಪರಾಧ ವಿಭಾಗದ ಪೋಲೀಸರು ತಿಳಿಸಿದ್ದಾರೆ.