ಕಾಸರಗೋಡು: ನಾಯನ್ಮಾರುಮೂಲೆ ಸರಕಾರಿ ಮಾದರಿ ಹೋಮಿಯೋ ಡಿಸ್ಪೆನ್ಸರಿಯ ನೂತನ ಬ್ಲೋಕ್ ಉದ್ಘಾಟನೆಗೊಂಡಿತು.
ಚೆಂಗಳ ಗ್ರಾಮ ಪಂಚಾಯತ್ ನ ಸ್ವಂತ ನಿಧಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಈ ಬ್ಲೋಕ್ ನಿರ್ಮಿಸಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ, ಜಿಲ್ಲಾ ಹೋಮಿಯೋ ವೈದ್ಯಾಧಿಕಾರಿ ಡಾ.ಐ.ಆರ್. ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಅನೇಕ ಗಣ್ಯರು ಉಪಸ್ಥಿತರಿದ್ದರು. ಹೋಮಿಯೋ ವೈದ್ಯಕೀಯ ಶಿಬಿರ ಉಚಿತ ರೂಪದಲ್ಲಿ ಮತ್ತು ತರಗತಿಗಳು ಜರುಗಿದುವು.