ಕಾಸರಗೋಡು: ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಎನ್.ಎಸ್.ಎಸ್. ಸ್ವಯಂಸೇವಕರಾಗಿ ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿ ಪಿ.ಆಕಾಶ್ ಆಯ್ಕೆಗೊಂಡಿದ್ದಾರೆ. ಬಿ.ಎಸ್.ಸಿ. ಕಂಪ್ಯೂಟರ್ ಸಯನ್ಸ್ ವಿದ್ಯಾರ್ಥಿಯಾಗಿದ್ದಾರೆ. ಅನೇಕ ಜನಜಾಗೃತಿ ಕಾರ್ಯಕ್ರಮಗಳಿಗೆ, ಕೋವಿಡ್ ಪ್ರತಿರೋಧ ಲಸಿಕೆ ಶಿಬಿರಗಳಿಗೆ, ವೀ ಡಿಸರ್ವ್ ವಿಶೇಷಚೇತನರ ಶಿಬಿರಗಳು, ಕಾಲೇಜು, ಮನೆಗಳ ಶುಚೀಕರಣ, ತರಕಾರಿ ತೋಟಗಳ ನಿರ್ಮಾಣ ಸಹಿತ ಅನೇಕ ಚಟುವಟಿಕೆಗಳಿಗೆ ಇವರು ನೇತೃತ್ವ ವಹಿಸಿದ್ದಾರೆ.