ಕುಂಬಳೆ: ಪುತ್ತಿಗೆ ಗ್ರಾಮಪಂಚಾಯತ್ ನ 70 ಕುಟುಂಬಶ್ರೀ ಸದಸ್ಯರಿಗೆ ಸಿ.ಡಿ.ಎಸ್. ಮುಖಾಂತರ 25 ಮೊಟ್ಟೆ ನೀಡುವ ಕೋಳಿಗಳು ಮತ್ತು ಗೂಡು ವಿತರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಸಿ.ಡಿ.ಎಸ್.ಅಧ್ಯಕ್ಷೆ ಸುಂದರಿ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಟಿ.ಸುರೇಂದ್ರನ್, ಉಪಾಧ್ಯಕ್ಷೆ ಜಯಂತಿ, ಸಹಾಯಕ ಕಾರ್ಯದರ್ಶಿ ಅಬ್ದುಲ್ಲ, ಕುಟುಂಬಶ್ರೀ ಲೆಕ್ಕಾಧಿಕಾರಿ ಪೃಥ್ವಿರಾಜ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.