ತಿರುವನಂತಪುರಂ: ನಾಳೆ ನಡೆಯಬೇಕಿದ್ದ ಮೊದಲ ವರ್ಷದ ಹೈಯರ್ ಸೆಕೆಂಡರಿ ಪರೀಕ್ಷೆಯನ್ನು ಭಾರೀ ಮಳೆಯ ಕಾರಣ ರಾಜ್ಯದ ವಿವಿಧೆಡೆ ಭೂಕುಸಿತ ಮತ್ತು ಹಾನಿಯಿಂದಾಗಿ ಮುಂದೂಡಲಾಗಿದೆ. ಸೆಪ್ಟೆಂಬರ್ 24 ರಂದು ಆರಂಭವಾದ ಪರೀಕ್ಷೆಗಳು ನಾಳೆ ಕೊನೆಗೊಳ್ಳಬೇಕಿತ್ತು. ಮುಂದೂಡಲ್ಪಟ್ಟ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ 4.35 ಲಕ್ಷ ವಿದ್ಯಾರ್ಥಿಗಳು ಪ್ಲಸ್ ಒನ್ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಪ್ರತಿ ಪರೀಕ್ಷೆಯ ನಡುವೆ ಮೂರರಿಂದ ಐದು ದಿನಗಳ ಮಧ್ಯಂತರವನ್ನು ನಿಗದಿಪಡಿಸಲಾಗಿದೆ. ನಾಳೆ ಈ ರೀತಿಯ ಕೊನೆಯ ಪರೀಕ್ಷೆ ನಡೆಯಲಿತ್ತು. ಏತನ್ಮಧ್ಯೆ, ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಅಕ್ಟೋಬರ್ 13 ರಂದು ಕೊನೆಗೊಂಡಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ ವಿಶೇಷ ಅನುಮತಿಯೊಂದಿಗೆ ಶಿಕ್ಷಣ ಇಲಾಖೆಯಿಂದ ಪ್ಲಸ್ ಒನ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಅನಿರೀಕ್ಷಿತ ಭಾರೀ ಮಳೆಯಿಂದಾಗಿ ಕೊನೆಯ ಒಂದು ಬಾಕಿ ಇರುತ್ತಾ ಅದನ್ನು ಮುಂದೂಡಲಾಯಿತು.