ಪೆರ್ಲ: ಸರ್ಕಾರ ನಿರ್ದೇಶನದಂತೆ ಶಾಲಾ ಮಕ್ಕಳಿಗಿರುವ ಹೋಮಿಯೋ ಇಮ್ಯೂನಿಟಿ ಬೂಸ್ಟರ್ ಔಷಧಿ ವಿತರಣೆಗಾಗಿ "ಮುಂಜಾಗ್ರತೆಯೊಡನೆ ಮುಂದಕ್ಕೆ" ಎಂಬ ಯೋಜನೆಯನ್ನು ಆರಂಭಿಸಲಾಗಿದೆ. ಇದರ ಅಂಗವಾಗಿ ಎಣ್ಮಕಜೆ ಪಂಚಾಯತಿ ಮಟ್ಟದ ಉದ್ಘಾಟನೆ ನಡೆಯಿತು. ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್.ಯೋಜನೆಯನ್ನು ಉದ್ಘಾಟಿಸಿ ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತೆವಹಿಸುವ ಸಲುವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಬೂಸ್ಟರ್ ಔಷಧಿ ಕೊಡಿಸುವುದರ ಬಗ್ಗೆ ರಕ್ಷಕರು ಗಮನಹರಿಸಬೇಕಾಗಿದೆ ಎಂದರು.
ಆರೋಗ್ಯ ,ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಭಿ, ಪಂ.ಸದಸ್ಯರಾದ ರಮ್ಲಾ ,ಉಷಾ ಮೊದಲಾದವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಎಣ್ಮಕಜೆ ಆಯುಷ್ ಪಿಎಚ್ ಸಿ ಮೆಡಿಕಲ್ ಆಧಿಕಾರಿ ಡಾ.ಅನಘಾ ಎಂ ಯೋಜನೆಯ ಬಗ್ಗೆ ತಿಳಿಸಿದರು.