ಕನ್ನಡ, ತುಳು ಹಾಗೂ ಆಂಗ್ಲ ಸಾಹಿತ್ಯ ಪ್ರಪಂಚದಲ್ಲಿ ಅಪ್ರತಿಮ ಸಾಧನೆ ಮಾಡಿದ ಹಿರಿಯರು ಮಲಾರ್ ಜಯರಾಮ ರೈ ಗಳು. ಮೂಲತಃ ಪತ್ರಕರ್ತರಾದ ರ್ಯೆ ಗಳ ಸಾಧನಾ ಪಥ ಹಲವು ವಿಸ್ತಾರ ಹರವಿನದು. ಡೆಕ್ಕನ್ ಹೆರಾಲ್ಡ್ ಆಂಗ್ಲ ದ್ಯೆನಿಕದ ಉಪಸಂಪಾದಕರಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಲಾರು ರ್ಯೆಗಳು ಮೂರು ಭಾಷೆಗಳಲ್ಲೂ ಧಾರಾಳ ಸಾಹಿತ್ಯ ಕೃಷಿ ನಡೆಸಿ ಕಾಸರಗೋಡಿಗೆ ಕೀರ್ತಿ ತರುತ್ತಿದ್ದಾರೆ. ಜೊತೆಗೆ ಆಧ್ಯಾತ್ಮಿಕತೆಯಲ್ಲೂ ತೊಡಗಿಸಿಕೊಂಡಿರುವ ಅವರ ಜೀವನ ಪಥ ಸಾಗಿಬಂದ ಸಮಗ್ರ ನೋಟಗಳೊಂದಿಗೆ ಸಮರಸ ಸುದ್ದಿ ನಡೆಸಿದ ಸಂವಾದದ ಆಯ್ದ ಭಾಗ ವೀಕ್ಷಕರಿಗೆ ಇಲ್ಲಿ ಬಿತ್ತರಿಸುತ್ತಿದ್ದೇವೆ. ವೀಕ್ಷಿಸಿ, ಲ್ಯೆಕ್ ನೀಡಿ,ಪ್ರೋತ್ಸಾಹಿಸಿ. ಸಲಹೆಗಳಿಗೂ ಮುಕ್ತ ಸ್ವಾಗತ.
ಸಮರಸ - ಸಂವಾದ:ನಿರಂತರ ಹುಡುಕಾಟದ ಯೋಗಿ ಬದುಕು: ಮಾಧ್ಯಮ,ಸಾಹಿತ್ಯ,ಆಧ್ಯಾತ್ಮ ಗಳ ಸಂಯೋಗ: ಅತಿಥಿ : ಮಲಾರ್ ಜಯರಾಮ ರೈ
0
ಅಕ್ಟೋಬರ್ 10, 2021
Tags