ಕೆಲವೊಮ್ಮ ಪ್ರಕೃತಿಯಲ್ಲಿ ಏನೆಲ್ಲಾ ವಿಚಿತ್ರಗಳು ನಡೆದೇ ಬಿಡುತ್ತವೆ. ಯಾರ ಊಹೆಗೂ ನಿಲುಕದ, ವಿಜ್ಞಾನಕ್ಕೂ ಮೀರಿದ ಕೆಲವೊಂದು ಘಟನೆಗಳು ನಡೆದೇಬಿಡುತ್ತವೆ. ಅದೇ ರೀತಿಯ ಘಟನೆ ಇದು. ಒಬ್ಬ ಪುರುಷ ಒಂದಲ್ಲಾ, ಎರಡಲ್ಲಾ… ಮೂರು ಮಕ್ಕಳಿಗೆ ಖುದ್ದು ಜನ್ಮ ನೀಡಿರುವ ಘಟನೆ ಇದು. ಕೆಲ ವರ್ಷಗಳ ಹಿಂದೆ ಭಾರಿ ಸುದ್ದಿಯಲ್ಲಿದ್ದ ಈ ವ್ಯಕ್ತಿ ಇದೀಗ ಮತ್ತೆ ಸುದ್ದಿ ಮಾಡುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈತನ ರೋಚಕ ಕಥೆ ಪುನಃ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಮತ್ತೆ ಮಗು ಬೇಡ ಎಂದು ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವುದು!
ಎಷ್ಟೋ ಬಾರಿ ಹೆಣ್ಣುಮಕ್ಕಳು ಅಂದುಕೊಳ್ಳುವುದುಂಟು. ಹೆರಿಗೆ ನೋವನ್ನು ತಾವೊಬ್ಬರೇ ಅನುಭವಿಸುವ ಬದಲು ಪುರುಷರಿಗೂ ದೇವರು ಮಗುವನ್ನು ಹೆರುವ ಸೌಕರ್ಯ ಕಲ್ಪಿಸಬಾರದೇ ಎಂದು. ಅದೇ ರೀತಿ ಪತ್ನಿಯ ನೋವನ್ನು ನೋಡಲಾಗದ ಕೆಲವೇ ಗಂಡಂದಿರು ಕೂಡ ಆಕೆಯ ಬದಲು ನನಗೇ ಈ ಹೆರಿಗೆ ಎನ್ನುವ ಕಷ್ಟ ಬರಬಾರದೇ ಎಂದುಕೊಳ್ಳುವುದೂ ಉಂಟು. ಆದರೆ ನಿಜವಾಗಿಯೂ ಅಂಥದ್ದೇ ಒಂದು ಘಟನೆ ನಡೆದಿದೆ.
ಇದು ಥಾಮಸ್ ಟ್ರೆಸ್ ಬಿಟೈ ಎನ್ನುವ ಪುರುಷನ ಕಥೆ. ಮೂರು ಬಾರಿ ಗರ್ಭ ಧರಿಸಿರುವ ಈತ ಮಗುವಿಗೆ ಜನ್ಮ ನೀಡಿದ್ದಾನೆ.
ಅಷ್ಟಕ್ಕೂ ಯಾರೀ ಥಾಮಸ್?
ಅಸಲಿಗೆ ಥಾಮಸ್ ತಮ್ಮ ಬಾಲ್ಯ ಮತ್ತು ಯೌವನದ ದಿನಗಳನ್ನು ಹುಡುಗಿಯಾಗಿ ಕಳೆದಿದ್ದ. ಈತ ರೂಪದರ್ಶಿ ಕೂಡ ಆಗಿದ್ದ. ನೋಡಲು ಸುಂದರನಾಗಿದ್ದ ಈತ ಅಮೆರಿಕದ ಮಿಸ್ ಟೀನ್ ಹುವೈ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮ ಹಂತ ಕೂಡ ತಲುಪಿದ್ದ.
ನಂತರ ಈತ ನ್ಯಾನ್ಸಿ ಎಂಬಾಕೆಯನ್ನು ಮದುವೆಯಾದ. ದಂಪತಿಗೆ ಎಷ್ಟು ವರ್ಷವಾದರೂ ಮಕ್ಕಳಾಗಿರಲಿಲ್ಲ. ಆದ್ದರಿಂದ ಆದರೆ ಅವರಿಗೆ ಮಕ್ಕಳಾಗಲಿಲ್ಲ. ಈತನಿಗೆ ಮೊದಲಿನಿಂದಲೂ ತಾನು ಗಂಡು ಆಗಬೇಕು ಎಂಬ ಆಸೆ ಬಹಳವಾಗಿತ್ತು. ಇದೀಗ ಆ ತುಡಿತ ಹೆಚ್ಚುತ್ತಲೇ ಪತ್ನಿಗೆ ವಿಚ್ಛೇದನ ಕೊಟ್ಟು, ಲಿಂಗವನ್ನು ಬದಲಿಸಿಕೊಂಡ.
ಆದರೆ ಹೆಣ್ತತನ ಅಂಗ ಮಾತ್ರ ಅವನಲ್ಲಿಯೇ ಇತ್ತು. ಆದ್ದರಿಂದ ಮಕ್ಕಳನ್ನು ಪಡೆಯಬಹುದು ಎಂದು ಆತನಿಗೆ ಅನ್ನಿಸಿ, ಆ ಬಗ್ಗೆ ವೈದ್ಯರ ಬಳಿ ಪ್ರಸ್ತಾಪಿಸಿದ. ಇದಕ್ಕೆ ಅವರು ಒಪ್ಪದಿದ್ದರೂ ಕೊನೆಗೆ ಹೇಗೋ ಥಾಮಸ್ ಒಪ್ಪಿಸಿದ. ನಂತರ ಆತ ದಾನಿಯಿಂದ ವೀರ್ಯವನ್ನು ಪಡೆದುಕೊಂಡ. ಹಲವಾರು ಪ್ರಕ್ರಿಯೆ ಬಳಿಕ ಆತ ಗರ್ಭ ಧರಿಸಿ 2008ರಲ್ಲಿ ಸುಂದರ ಮಗುವಿಗೆ ಜನ್ಮವನ್ನೂ ನೀಡಿದ. ಇದರಿಂದ ಉತ್ಸುಕನಾದ ಆತ ಮತ್ತೆ ಎರಡು ಬಾರಿ ಅದೇ ದಾನಿಯಿಂದ ವೀರ್ಯ ಪಡೆದು ಗರ್ಭ ಧರಿಸಿ ಮತ್ತೆ ಇಬ್ಬರು ಮಕ್ಕಳಿಗೆ ತಾಯಿಯಾದ.
ಒಟ್ಟಿನಲ್ಲಿ ಮೂರು ಮಕ್ಕಳು ಹುಟ್ಟಿದ ಮೇಲೆ ಅಷ್ಟು ಸಾಕು, ತನ್ನ ಆಸೆ ಈಡೇರಿತು ಎಂದುಕೊಂಡಿರುವ ಈತ ಈಗ ಸಂತಾನೋತ್ಪತ್ತಿ ಅಂಗವನ್ನು ತೆಗೆಸಿಕೊಂಡಿದ್ದಾನೆ. ಕೆಲ ವರ್ಷಗಳಿಂದ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿರುವ ಈತ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾನೆ.
ಅಂದಹಾಗೆ, ಹುಟ್ಟುತ್ತಲೇ ಪುರುಷರಾಗಿದ್ದರೂ ಮಗು ಜನಿಸಿರುವ ಕೆಲವು ಉದಾಹರಣೆಗಳು ಅಲ್ಲಲ್ಲಿ ನಡೆದಿರುವುದು ಉಂಟು.