HEALTH TIPS

ಕೋವಿಡ್‌ ಲಸಿಕೆ ದಾಸ್ತಾನು ಇದ್ದರೂ ಅಭಿಯಾನ ಮತ್ತೆ ನಿಧಾನಗತಿ!, ಕಾರಣವೇನು?

             ನವದೆಹಲಿ: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಗಳ ಸಂಗ್ರಹ ಈಗ ಅಧಿಕವಾಗಿದ್ದರೂ ಕೂಡಾ ಕೊರೊನಾ ಲಸಿಕೆ ಅಭಿಯಾನ ಮಾತ್ರ ನಿಧಾನಗತಿಯಲ್ಲಿ ಸಾಗಿದೆ ಎಂಬುದು ತಿಳಿದು ಬಂದಿದೆ. ಈ ಲಸಿಕೆ ನೀಡಿಕೆ ನಿಧಾನಗತಿ ಆಗಿರುವ ವಿಚಾರವು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

         ಭಾರತದಲ್ಲಿ ಅಧಿಕವಾಗಿ ಅಂದರೆ ಸರಿ ಸುಮಾರು ಶೇಕಡ 90ರಷ್ಟು ಅಸ್ಟ್ರಾಜೆನೆಕಾದ ಲಸಿಕೆಯನ್ನು ನೀಡಲಾಗುತ್ತದೆ. ಕಳೆದ ಮೇ ತಿಂಗಳಿನಲ್ಲಿ ಈ ಲಸಿಕೆಗಳ ಉತ್ಪಾದನೆ ಕೊರತೆಯಿಂದಾಗಿ ದೇಶದಲ್ಲಿ ಭಾರೀ ಸಂಚಲನ ಮೂಡಿತ್ತು. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಲಸಿಕೆಯ ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ ನಡುವಿನ ಅಂತರವನ್ನು 12 ರಿಂದ 16 ವಾರದವರೆಗೆ ಹೆಚ್ಚಳ ಮಾಡಲಾಯಿತು.

             ವಿಶ್ವ ಆರೋಗ್ಯ ಸಂಸ್ಥೆಯು ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ ನಡುವಿನ ಅಂತರವನ್ನು 8 ರಿಂದ 12 ವಾರಗಳ ಇರಬೇಕು ಎಂದು ಶಿಫಾರಸು ಮಾಡುತ್ತದೆ. ಈ ಸಂದರ್ಭದಲ್ಲಿ ಭಾರತದಲ್ಲಿ 944 ಮಿಲಿಯನ್ ವಯಸ್ಕರ ಪೈಕಿ ಶೇಕಡ 74 ಕನಿಷ್ಠ ಒಂದು ಲಸಿಕೆ ಡೋಸ್ ನೀಡಲು ಸಾಧ್ಯವಾಗಿದೆ. ಕೇವಲ ಶೇಕಡ 30 ರಷ್ಟು ಮಂದಿಗೆ ಮಾತ್ರ ಎರಡೂ ಡೋಸ್‌ ಲಸಿಕೆಯನ್ನು ನೀಡಲು ಸಾಧ್ಯವಾಗಿದೆ.

           ಭಾರತದಲ್ಲಿ ಹೆಚ್ಚಾಗಿ ಅಸ್ಟ್ರಾಜೆನೆಕಾದ ಕೋವಿಶೀಲ್ಡ್‌ ಲಸಿಕೆಯನ್ನು ನೀಡಲಾಗುತ್ತದೆ. ಭಾರತದಲ್ಲಿ ನೀಡಲಾದ 97.76 ಮಿಲಿಯನ್‌ ಲಸಿಕೆಗಳ ಪೈಕಿ 861 ಮಿಲಿಯನ್ ಡೋಸ್‌ ಕೋವಿಶೀಲ್ಡ್‌ ಆಗಿದೆ. ಇನ್ನು ಅಸ್ಟ್ರಾಜೆನೆಕಾದ ಮತ್ತೊಂದು ಲಸಿಕೆ ಕೋವಾಕ್ಸಿನ್‌ನ ಮೊದಲ ಹಾಗೂ ಎರಡನೇ ಡೋಸ್‌ನ ನಡುವೆ ಅಂತರವು 4 ರಿಂದ 6 ವಾರಗಳು ಆಗಿದೆ.

          ಕಳೆದ ಕೆಲವು ದಿನಗಳಿಂದ ಕೋವಿಡ್ ಲಸಿಕೆಗಳ ದೈನಂದಿನ ಸಂಗ್ರಹ 100 ಮಿಲಿಯನ್‌ ಡೋಸ್‌ಗಳನ್ನು ಮೀರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳುತ್ತದೆ. ಈ ನಡುವೆ ಈ ತಿಂಗಳಲ್ಲಿ ದೈನಂದಿನ ಕೊರೊನಾ ಲಸಿಕೆ ನೀಡಿಕೆ ಸುಮಾರು 5 ಮಿಲಿಯನ್‌ಗೆ ಇಳಿಕೆ ಕಂಡಿದೆ. ಇನ್ನು ಕಳೆದ ವಾರದಿಂದ ಅದಕ್ಕಿಂತಲೂ ಕಡಿಮೆ ಆಗಿದೆ. ಕಳೆದ ತಿಂಗಳು ದೈನಂದಿನ ಕೊರೊನಾ ಲಸಿಕೆ ನೀಡಿಕೆ ವೇಗವು 25 ಮಿಲಿಯನ್‌ ಆಗಿತ್ತು.

         ಆರೊಗ್ಯ ಸಚಿವಾಲಯವು ತಜ್ಞರ ಸಲಹೆಯನ್ನು ಪಡೆದು ಕೋವಿಡ್‌ ಲಸಿಕೆ ನೀಡಿಕೆ ವಿಧಾನದಲ್ಲಿ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಕಳೆದ ಮೇ ತಿಂಗಳಿನಲ್ಲಿ ಕೊರೊನಾ ವೈರಸ್‌ ಲಸಿಕೆ ನೀಡಿಕೆಯು ಲಸಿಕೆಯ ಕೊರತೆಯ ಕಾರಣದಿಂದಾಗಿ ಕಡಿಮೆ ಆಗಿತ್ತು. ಆದರೆ ಈ ಬಾರಿ ಲಸಿಕೆಯ ದಾಸ್ತಾನು ಇದ್ದರೂ ಕೂಡಾ ಲಸಿಕೆ ನೀಡಿಕೆ ಪ್ರಮಾಣವು ಕಡಿಮೆ ಆಗಿದೆ.

ಈ ವಿಚಾರದಲ್ಲಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವದೆಹಲಿಯಲ್ಲಿ ವೈದ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಆಗಿರುವ ಚಂದ್ರಕಾಂತ್‌ ಲಹರಿಯಾ, "ಕೊರೊನಾ ಲಸಿಕೆ ಉತ್ಪಾದನೆ ಕೊರತೆ ಮಾತ್ರವೇ ಕೊರೊನಾ ಲಸಿಕೆ ನೀಡಿಕೆಯ ಇಳಿಕೆಗೆ ಕಾರಣವಾಗದು," ಎಂದು ತಿಳಿಸಿದ್ದಾರೆ.

          ಈ ಸಂದರ್ಭದಲ್ಲೇ, "ಕೊರೊನಾ ವೈರಸ್‌ ಲಸಿಕೆ ನೀಡಿಕೆ ಅಭಿಯಾನದ ದಿಡೀರ್‌ ನಿಧಾನಗತಿಗೆ ಬೇರೆ ವೈಜ್ಞಾನಿಕ ಕಾರಣಗಳು ಕಂಡು ಬರುವುದಿಲ್ಲ. ಆದರೆ ಅಧಿಕ ರಕ್ಷಣೆ, ಅಧಿಕ ಪರಿಣಾಮದ ಹಿನ್ನೆಲೆ ಕೋವಿಡ್‌ ಲಸಿಕೆ ನೀಡಿಕೆಯ ಮೊದಲ ಹಾಗೂ ಎರಡನೇ ಡೋಸ್‌ ನಡುವಿನ ಅಂತರ ಹೆಚ್ಚಳವು ಈ ಲಸಿಕೆ ನೀಡಿಕೆ ನಿಧಾನಗತಿಗೆ ಕಾರಣವಾಗಿರಬಹುದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

           "ಕೊರೊನಾ ವೈರಸ್‌ ಸೋಂಕು ವಿರುದ್ಧ ಈವರೆಗೂ ಲಸಿಕೆಯನ್ನು ಪಡೆಯದವರನ್ನು ನಾವು ಲಸಿಕೆ ಪಡೆಯುವಂತೆ ಒತ್ತಾಯ ಮಾಡುತ್ತಿದ್ದೇವೆ, ಪ್ರೋತ್ಸಾಹ ನೀಡುತ್ತಿದ್ದೇವೆ," ಎಂದು ಸರ್ಕಾರವು ಹೇಳಿದೆ. ಇನ್ನು ಈ ನಡುವೆ "ಸೋಂಕಿನ ಕಾರಣದಿಂದಾಗಿ ಜನರಲ್ಲೇ ನೈಸರ್ಗಿಕವಾಗಿ ಪ್ರತಿಕಾಯಗಳು ಸೃಷ್ಟಿ ಆಗಿದೆ," ಎಂದು ಚಂದ್ರಕಾಂತ್‌ ಲಹರಿಯಾ ಹೇಳಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries