ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ಕೃಷಿ ಅಧಿಕಾರಿಯಾಗಿ ಸ್ತುತ್ಯರ್ಹ ಸೇವೆ ಸಲ್ಲಿಸಿ ಇದೀಗ ಮಲಪ್ಪುರಂ ಜಿಲ್ಲೆಗೆ ವರ್ಗಾವಣೆಗೊಳ್ಳುತ್ತಿರುವ
ವಿನೀತ್ ವಿ.ವರ್ಮರಿಗೆ ಎಣ್ಮಕಜೆ ಪಂಚಾಯತ್ ವತಿಯಿಂದ ಬೀಳ್ಕೊಡಲಾಯಿತು.
ಎರ್ನಾಕುಳಂ ಜಿಲ್ಲೆಯವರಾದ ವಿನೀತ್ ವಿ.ವರ್ಮ ನಾಲ್ಕು ವರ್ಷಗಳ ಹಿಂದೆ ಪೆರ್ಲ ಕೃಷಿಭವನದಲ್ಲಿ ಕೃಷಿ ಅಧಿಕಾರಿಯಾಗಿ ನೇಮಕ ಗೊಂಡಿದ್ದರು.ಕೃಷಿಕರು, ಜನ ಪ್ರತಿನಿಧಿಗಳು, ಜನ ಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
2018ರಲ್ಲಿ ಎಣ್ಮಕಜೆ ಗ್ರಾ.ಪಂ.ಅವಿಶ್ವಾಸ ಗೊತ್ತುವಳಿ ಮಂಡನೆ ಹಾಗೂ ನಿರ್ಣಯದ ವೇಳೆ ರಿಟನಿರ್ಂಗ್ ಅಧಿಕಾರಿಯಾಗಿದ್ದರು.ಕಳೆದ ಲೋಕಸಭೆ ಚುನಾವಣೆಯಲ್ಲಿ ಓಬ್ಸರ್ವರ್ ಲೈಸನ್ ಅಧಿಕಾರಿ ಹಾಗೂ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲಾ ಎಲೆಕ್ಷನ್ ಆಬ್ಸರ್ವರ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಎಣ್ಮಕಜೆ ಗ್ರಾ. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ಪಂಚಾಯತು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ,ಪಂ. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಎ.ಕುಲಾಲ್,ಸೌಧಾಭಿ ಹನೀಫ್ ನಡುಬೈಲ್,ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್,ಬ್ಲೋಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಗ್ರಾ. ಪಂ.ಸದಸ್ಯರಾದ ರಾಮಚಂದ್ರ ಎಂ,ನರಸಿಂಹ,ರಮ್ಲ,ಕುಸುಮಾವತಿ,ಉಷಾ ಗಣೇಶ್, ಪಂ.ಕಾರ್ಯದರ್ಶಿ ಅಚ್ಚುತ್ತ ಮಣಿಯಾಣಿ,ಮಾಜಿ ಉಪಾಧ್ಯಕ್ಷರಾದ ಅಬುಬಕ್ಕರ್ ಸಿದ್ದಿಕ್,ಆಯಿಷಾ ಎ.ಎ,ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.