ಪೆರ್ಲ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನುಮ ದಿನ ಹಾಗೂ ಬಾರತೀಯ ಜನತಾ ಪಕ್ಷದ ಸ್ಥಾಪಕರಾದ ಶ್ರೀ ಪಂಡಿತ್ ದೀನ್ ದಯಾಲ್ ಉಪಾಧ್ಯಾಯರ ಜನುಮ ದಿನದ ಅಂಗವಾಗಿ "ಸೇವಾ ಹೇ ಸಂಘಟನ್ "ಎಂಬ ಘೋಷಣೆಯೊಂದಿಗೆ ನಡೆಸುವ ಜನಪರ ಸಾಮಾಜಿಕ ಚಟುವಟಿಕೆಗಳಲ್ಲಿ ಟೀಮ್ ಛತ್ರಪತಿ ಮಣಿಯಂಪಾರೆ ತೊಡಗಿಸಿಕೊಂಡು ಮಾದರಿಯಾಗಿದೆ. ಶೇಣಿ, ಮಣಿಯಂಪಾರೆ, ಬೆದ್ರಂಪಳ್ಳ, ದೇರಡ್ಕ ಪ್ರದೇಶದ ಸಂಘ ಪರಿವಾರ ಕಾರ್ಯಕರ್ತರ ಒಕ್ಕೂಟವಾದ ಟೀಮ್ ಛತ್ರಪತಿ ಮಣಿಯಂಪಾರೆ ಇದರ ನೇತೃತ್ವದಲ್ಲಿ ಪೆರ್ಲ ಬಾಲಕೃಷ್ಣ ಭಂಡಾರಿಯವರ ಮನೆ ನಿರ್ಮಾಣಕ್ಕೋಸ್ಕರ ಸಂಗ್ರಹಿಸಿದ 11000 ರೂಪಾಯಿಗಳನ್ನು ಈ ಯೋಜನೆಗನುಗುಣವಾಗಿ ಹಸ್ತಾಂತರಿಸಲಾಯಿತು.
ಶೇಣಿಯ ಬಿಜೆಪಿ ಹಿರಿಯ ನೇತಾರರಾದ ಬಾಲಕೃಷ್ಣ ನಾಯಕ್, ಉಮೇಶ್ ನಾಯಕ್ ಇವರು ನಿರ್ಮಾಣ ಕಾರ್ಯಗಳಿಗೆ ನೇತೃತ್ವವಹಿಸುವ ವಾರ್ಡ್ ಸದಸ್ಯೆ ಇಂದಿರಾ ಇವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಪಂಚಾಯತು ಸಮಿತಿ ಅಧ್ಯಕ್ಷÀ ಸುಮಿತ್ ರಾಜ್,ಟೀಮ್ ಛತ್ರಪತಿ ಒಕ್ಕೂಟ್ಟದ ಅಧ್ಯಕ್ಷ ಕೆ.ಪಿ. ಅನಿಲ್ ಕುಮಾರ್, ಉಪಾಧ್ಯಕ್ಷರಾದ ವಿ. ಪ್ರಸಾದ್, ಸುರೇಂದ್ರ ಬಿ, ಕಾರ್ಯಕರ್ತರಾದ ಲೋಕೇಶ್ ಬಿ. ಆರ್, ಕಿರಣ್,ಸುರೇಶ ಆರ್ ಎಸ್ ಎಸ್ ಮುಖಂಡರಾದ ರಾಜೇಶ್ ರೈ ಬದಿಯಡ್ಕ, ಗಣೇಶ್ ಶೆಟ್ಟಿ ಪೆರ್ಲ, ಟಿ. ಪ್ರಸಾದ್, ಕೆ.ಜಿ. ನಾರಾಯಣ ಮೊದಲಾದವರು ಉಪಸ್ಥಿತರಿದ್ಧರು.